ಬಾಗಲಕೋಟೆ: ಎತ್ತಿನ ಮೈ ತೊಳೆಯಲು ಹೋದ ವೇಳೆ ಮೊಸಳೆ ದಾಳಿ (Crocodile Attack) ಮಾಡಿದ್ದರಿಂದ ಕೈ ತುಂಡಾಗಿ, ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದ ಬಳಿಯ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ.
ಧರಿಯಪ್ಪ ಮೇಟಿ (32) ಮೊಸಳೆಯಿಂದ ದಾಳಿಗೊಳಗಾದ ರೈತ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಎತ್ತಿನ ಮೈ ತೊಳೆಯುತ್ತಿದ್ದಾಗ, ಏಕಾಏಕಿ ರೈತನ ಮೇಲೆ ಮೊಸಳೆ ದಾಳಿ ಮಾಡಿದೆ. ಈ ವೇಳೆ ಧರಿಯಪ್ಪನ ಬಲಗೈಗೆ ಮೊಸಳೆ ಬಾಯಿ ಹಾಕಿದ ಪರಿಣಾಮ ಕೈ ತುಂಡಾಗಿದೆ. ದಾಳಿಯ ವೇಳೆ ಎಡಗೈಯಲ್ಲಿ ಎತ್ತಿನ ಹಗ್ಗ ಹಿಡಿದಿದ್ದರಿಂದ ರೈತನನ್ನು ಹಿನ್ನೀರಿನಿಂದ ಎತ್ತು ಹೊರಕ್ಕೆ ಎಳೆದುತಂದಿದೆ. ದಡಕ್ಕೆ ಬರುತ್ತಿದ್ದಂತೆ ಮೊಸಳೆ, ರೈತನನ್ನು ಬಿಟ್ಟು ಮತ್ತೆ ನೀರಿನೊಳಗೆ ಹೋಗಿದೆ. ಇದರಿಂದ ಅದೃಷ್ಟವಶಾತ್ ಬದುಕುಳಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಯುವರೈತನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೀಳಗಿ ಶಾಸಕ ಜೆ.ಟಿ. ಪಾಟೀಲ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಅರಣ್ಯಾಧಿಕಾರಿಗಳ ಜತೆ ಮಾತನಾಡಿರುವ ಶಾಸಕರು, ರೈತನಿಗೆ ಪರಿಹಾರ ನೀಡಲು ಸೂಚನೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Agniveer Death : ನಾಸಿಕ್‌ನಲ್ಲಿ ಶೂಟಿಂಗ್ ಅಭ್ಯಾಸದ ವೇಳೆ ಗನ್ ಶೆಲ್ ಸ್ಫೋಟ: ಇಬ್ಬರು ಅಗ್ನಿವೀರರು ಸಾವು
ಸಿಟ್ಟಿಗೆದ್ದ ಕುದುರೆ ದಾಳಿಗೆ ಸಿಲುಕಿದ ಯುವಕ ಜಸ್ಟ್ ಮಿಸ್ ; ವಿಡಿಯೋ ನೋಡಿ

ಸಾಕು ಪ್ರಾಣಿಗಳಾದರೂ ಸರಿ ಕಾಡು ಪ್ರಾಣಿಗಳಾಗಿದ್ದರೂ ಸರಿ ಅವುಗಳು ಯಾವಾಗ, ಯಾರ ಮೇಲೆ, ಯಾವ ಕ್ಷಣದಲ್ಲಿ ಬೇಕಾದರೂ ದಾಳಿ ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರುವುದು ಬಹುಮುಖ್ಯ. ಇಂತಹ ಒಂದು ಸಂದೇಶ ಸಾರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral Video) ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಅದಕ್ಕೆ ಕಾರಣ ಕುದುರೆಯೊಂದು ಯುವಕನ ಮೇಲೆ ದಾಳಿ (Horse Attack) ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣವಾದ ವೈರಲ್ ಆಗಿರುವುದು.
ಇದು ಪ್ರಾಣಿಗಳ ಅನಿರೀಕ್ಷಿತ ವರ್ತನೆಯ ಬಗ್ಗೆ ತಿಳಿಸಿದೆ. ಅಕ್ಟೋಬರ್ 7ರಂದು ಹಂಚಿಕೊಂಡಿರುವ ಈ ವಿಡಿಯೋವನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಎಚ್ಚರಿಕೆಯ ಕುರಿತಾಗಿ ಕಾಮೆಂಟ್ ಕೂಡ ಮಾಡಿದ್ದಾರೆ.
ವೈಲ್ಡ್‌ಲೈಫ್ ಅನ್‌ಸೆನ್ಸಾರ್ಡ್ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಕುದುರೆಯು ನಾಯಿ ಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲ ಅದರ ಹತ್ತಿರವೇ ನಿಂತಿದ್ದ ಯುವಕನ ಮೇಲೂ ದಾಳಿ ನಡೆಸಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಯುವಕನು ಕುದುರೆಯ ಮರಿಯನ್ಉ ಎತ್ತಲು ಪ್ರಯತ್ನಿಸಿದ್ದು, ಆಗ ಕುದುರೆ ಅದರ ರಕ್ಷಣೆಗಾಗಿ ಧಾವಿಸಿದೆ. ಪ್ರತಿಯಾಗಿ ಯುವಕನ ಮೇಲೆ ದಾಳಿ ಮಾಡಿದೆ. ಪಕ್ಕದಲ್ಲೇ ಇದ್ದ ನಾಯಿಗೂ ಕುದುರೆ ಸಾಕಷ್ಟು ಒದೆ ನೀಡಿದೆ. ಈ ಎಲ್ಲ ದೃಶ್ಯಗಳು ಕೆಮರಾದಲ್ಲಿ ಸೆರೆಯಾಗಿದೆ.
— Wildlife Uncensored (@TheeDarkCircle) October 7, 2024
ವೈರಲ್ ಆಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಕುದುರೆಯ ಆಕ್ರಮಣಕ್ಕೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಾಯಿ ಹೇಗಿದೆ ಎಂದು ಪ್ರಶ್ನಿಸಿದ್ದಾರೆ.
Viral Video: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ!
ಪ್ರಾಣಿಗಳ ನಡವಳಿಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಅವುಗಳನ್ನೂ ಗೌರವಿಸಬೇಕು ಎಂದು ಹೇಳಿದ್ದಾರೆ. ಕೆಲವರು ಯುವಕನ ಧೈರ್ಯವನ್ನು ಮೆಚ್ಚಿದ್ದು, ಇನ್ನು ಕೆಲವರು ನಾಯಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು.