ಇಂದಿನಿಂದ ತುಮಕೂರಿನಲ್ಲಿ ಸಿಪಿಐಎಂ ಪಕ್ಷದ 24ನೇ ರಾಜ್ಯ ಸಮ್ಮೇಳನ ೩೦೦ ಪ್ರತಿನಿಧಿಗಳು ಭಾಗಿ
ಬಾಗೇಪಲ್ಲಿ: ದೇಶದಲ್ಲಿ ಒಂದು ದಶಕದಿಂದೀಚೆಗೆ ರಾಷ್ಟ್ರೀಯ ಪಕ್ಷಗಳ ಜೆತೆಗೆ ಕಾರ್ಪೊರೇಟ್ ಸಂಸ್ಕೃತಿ ಸಖ್ಯ ಬೆಳೆಸಿರುವುದು ಹೆಚ್ಚಾಗಿದೆ.ಈ ಅಪವಿತ್ರ ಮೈತ್ರಿಯು ಸಿಪಿಎಂನಂತಹ ಎಡಪಕ್ಷ ಮತ್ತು ಸ್ಥಳೀಯ, ಪ್ರಾದೇಶಿಕ ಪಕ್ಷಗಳು ದಮನಕ್ಕೆ ಮುನ್ಸೂಚನೆಯಾಗಿದೆ ಎಂದು ಸಿಪಿಎಂ ಪಕ್ಷದ ಮುಖಂಡರು ಗಂಭೀರ ಆರೋಪ ಮಾಡಿದೆ.
ಬಾಗೇಪಲ್ಲಿ ಪಟ್ಟಣದಲ್ಲಿರುವ ಸಿಪಿಎಂನ ಕಚೇರಿ ಸುಂದರಯ್ಯ ಭವನದಲ್ಲಿ ಡಿ.೨೯,೩೦ ಮತ್ತು ೩೧ ಮೂರುದಿನಗಳ ಕಾಲ ತುಮಕೂರಿನಲ್ಲಿ ನಡೆಯಲಿರುವ ಸಿಪಿಐಎಂ ಪಕ್ಷದ ೨೪ ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಿ ಮುಖಂಡರು ಮಾತನಾಡಿದರು.
ಈ ವೇಳೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆAಕಟಪ್ಪ ಮಾತನಾಡಿ ದುಡಿಯುವ ಜನರ ಒಂದು ಶಕ್ತಿಯಾಗಿ ಬೆಳೆಯಬೇಕಾಗಿರುವ ಸಿಪಿಐಎಂ ಎಡಪ್ರಜಾಸತ್ತಾತ್ಮಕ ರಂಗವನ್ನು ನಿರ್ಮಾಣ ಮಾಡಲು ಮಹತ್ತರ ಪಾತ್ರವನ್ನು ವಹಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾರ್ಪೋರೇಟ್ ಪರವಾದ ನೀತಿಗಳನ್ನು ಜಾರಿಮಾಡುತ್ತಿವೆ. ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ಸೌಹಾರ್ದತೆಯನ್ನು ಕದಡಿ ಕೋಮುವಾದ ಬಿತ್ತಲಿಕ್ಕೆ ಕಾರಣವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಿದಲ್ಲಿದ್ದರೂ ರೈತವಿರೋಧಿ ಕಾನೂನುಗಳನ್ನು ಎದುರಿಸಲು ಸಾಧ್ಯವಾಗಿಲ್ಲ. ಭಾರತ ದೇಶದಲ್ಲಿ ಕಾಪೋರೇಟ್ ಮೈತ್ರಿ ದಾಳಿ ನಡೆಸುತ್ತಿರುವುದು ಕಮ್ಯುನಿಸ್ಟ್ ಪಕ್ಷಗಳ ಮೇಲೆಯೇ ಎಂಬುದು ಸ್ಪಷ್ಟ. 2004 ರಿಂದಲೇ ಸಿಪಿಎಂ ಮತ್ತಿತರ ಎಡಪಕ್ಷಗಳ ಮೇಲೆ ದಾಳಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೂ ದೇಶದಲ್ಲಿ ಕಾರ್ಮಿಕ ಮತ್ತು ಅಸಂಘಟಿತ ವರ್ಗಗಳ ಪರವಾಗಿ ಬಲಿಷ್ಟವಾದ ಹೋರಾಟ ಮಾಡುವ ಮೂಲಕ ಪ್ರಮುಖ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಸಿಪಿಎಂ ಪಕ್ಷವು ತುಮಕೂರಿ ನಲ್ಲಿ ರಾಜ್ಯ ಸಮ್ಮೇಳನವನ್ನು ಡಿ.೨೯ ರಂದು ತುಮಕೂರಿನಲ್ಲಿ ನಡೆಸುತ್ತಿದ್ದು ಸುಮಾರು 300 ಆಯ್ದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು
ಈ ಸಮ್ಮೇಳನವು ವಿಶೇಷವಾಗಿದ್ದು ಕರ್ನಾಟಕ ರಾಜ್ಯದಲ್ಲಿ ಆಗಿರುವ ರಾಜಕೀಯ ಬದಲಾವಣೆಗಳ ಬಗ್ಗೆ ಸಮಗ್ರ ಅಧ್ಯಯನ ಬಗ್ಗೆ ಇಲ್ಲಿ ಚಿಂತನ ಮಂಥನ ನಡೆಸಲಿದೆ. ಮುಖ್ಯವಾಗಿ ಜಾತ್ಯಾತೀತತೆ,ಧರ್ಮನಿರಪೇಕ್ಷತೆ ಬಗ್ಗೆ ಮಾತ ನಾಡುತ್ತಿರುವವರನ್ನು ಮಟ್ಟಹಾಕುವ ಪ್ರಯತ್ನ ನಿರಂತರವಾಗಿ ಸಿಪಿಎಂನಿಂದ ನಡೆಯುತ್ತಿದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಾಗಿದ್ದ ಅನುದಾನ ಕೊಡುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಬAದ ಸರಿಯಾಗಿಲ್ಲ. ಉದ್ಯೋಗ ಖಾತರಿ ಮತ್ತಿತರ ಮಹತ್ತರವಾದ ಯೋಜನೆಗಳನ್ನು ಸಡಲಿಸುವ ಪ್ರಯತ್ನ ನಿರಂತರ ವಾಗಿ ನಡೆಯುತ್ತಿದೆ. ರೈತರಿಗೆ ಸಿಗಬೇಕಾಗಿದ್ದ ಭೂಮಿ ಕಾರ್ಪೋರೇಟ್ ಕಂಪನಿಗಳ ಕೈಗೆ ಕೊಡಲು ನರೇಂದ್ರ ಮೋದಿ ಸರ್ಕಾರ ಯತ್ನಿಸುತ್ತಿದ್ದರೂ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ ಎಂದರು.
ಮುಂದಿನ ೩ ವರ್ಷಗಳಲ್ಲಿ ರಾಜ್ಯದಲ್ಲಿ ಕಮ್ಯುನಿಸ್ಟ್ ಚಳುವಳಿಯನ್ನು ಬಲಿಷ್ಠಗೊಳಿಸಬೇಕು ಎಂಬ ಉದ್ದೇಶದಿಂದ ಸಮ್ಮೇಳಗಳನ್ನು ನಡೆಸಲಾಗುತ್ತಿದೆ ಎಂದರು. ಈ ಸಮ್ಮೇಳನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ 22 ಪ್ರತಿನಿಧಿಗಳ ಜೊತೆಗೆ ರ‍್ಯಾಲಿಯಲ್ಲಿ ಭಾಗವಹಿಸಲು ಬಾಗೇಪಲ್ಲಿಯಿಂದ ಸುಮಾರು 500 ಜನರು ತೆರಳುತ್ತಿದ್ದಾರೆ. ಕೃಷ್ಣ ನದಿ ನೀರನ್ನು ಕೇಳುವ ಪ್ರಮುಖ ಉದ್ದೇಶವೂ ನಮ್ಮದಾಗಿದೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಲಾಗುವುದು. ಸಿಪಿಎಂ ಬಲಿಷ್ಠ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.
ಸಿಪಿಎಂ ತಾ ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ಮುಖಂಡರಾದ ಕೆ.ನಾಗರಾಜು, ಚನ್ನರಾಯಪ್ಪ, ಡಿ.ಟಿ.ಮುನಿಸ್ವಾಮಿ, ವಾಲ್ಮೀಕಿಅಶ್ವತ್ಥಪ್ಪ, ಓಬಳರಾಜು, ಜಿ.ಕೃಷ್ಣಪ್ಪ , ಕೃಷ್ಣಪ್ಪ ಉಪಸ್ಥಿತರಿದ್ದರು.