ಬಾಗೇಪಲ್ಲಿ: ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಮಹಿಳಾ ಶಿಕ್ಷಣಕ್ಕೆ ಶ್ರಮಿಸಿದ ಸಾವಿತ್ರಿಬಾಯಿ ಫುಲೆ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿಯಾಗಿದೆ’ ಎಂದು ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ ಕಲಾ ಶಿಕ್ಷಕ ರಾಮಚಂದ್ರಪ್ಪ ಹೇಳಿದರು
ಅವರು ಪಟ್ಟಣದ ಬಾಲಕರ ಪ್ರೌಢ ಶಾಲೆಯಲ್ಲಿ ಸಾವಿತ್ರಿಬಾಯಿ ಪುಲೆ ಚಿತ್ರ ಪಟ್ಟಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸಲು ಸಾವಿತ್ರಿಬಾಯಿ ಕೊಡುಗೆ ದೊಡ್ಡದು. ಅವರು ನಮ್ಮೆಲ್ಲರಿಗೂ ಆದರ್ಶ ತೋರಿದ ಧೀಮಂತ ಮಹಿಳೆ’ ಎಂದು ನೆನೆದರು.
೧೮ನೇ ಶತಮಾನದಲ್ಲಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ಅಕ್ಷರ ಕ್ರಾಂತಿ ಮೂಲಕ ಶೋಷಿತ ಸಮುದಾಯಗಳಿಗೆ ಅಕ್ಷರದ ದೀಕ್ಷೆ ನೀಡಿದರು. ತಮ್ಮ ಇಡೀ ಜೀವನವನ್ನು ಶೋಷಿತರು ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಮುಡಿಪಿಟ್ಟ ದಂಪತಿ ಸಮಾಜ ಸುಧಾರಣೆಗೆ ತಮ್ಮದೇ ಆದ ಕೊಡುಗೆ ನೀಡಿದರು’ ಎಂದು ಹೇಳಿದರು.
ಶತಮಾನಗಳ ಕಾಲ ಅವಕಾಶಗಳಿಂದ ವಂಚಿತರಾಗಿದ್ದ ಮಹಿಳೆಯರ ಸಬಲೀಕರಣಕ್ಕಾಗಿ ಶಿಕ್ಷಣದ ಹಾದಿಯನ್ನು ಆಯ್ದುಕೊಂಡು, ಸ್ವತಃ ತಾವೇ ಶಿಕ್ಷಕಿಯಾಗಿ ಇತರೆ ಮಹಿಳೆಯರಿಗೆ ಪ್ರೇರಣೆಯಾದ ಧೀಮಂತ ಮಹಿಳೆ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ನೆನೆದು, ಗೌರವ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ವಿ ವೆಂಕಟೇಶ್ ಶಿಕ್ಷಕರಾದ ನಾರಾಯಣಪ್ಪ ,ಕೆ ವಿ ಶ್ರೀನಿವಾಸ್, ಎನ್ ವೆಂಕಟ ರಮಣ ,ಬಿಎಸ್ ಕೃಷ್ಣ, ಸೌಮ್ಯ ,ಪ್ರೇಮಕುಮಾರಿ,ಜಿ. ಲಕ್ಷ್ಮೀದೇವಮ್ಮ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: chikkaballapurnews