ಗೌರಿಬಿದನೂರು : ಕುವೆಂಪು ಅವರ ಸಾಹಿತ್ತಯದಲ್ಲಿರುವ ವೈಚಾರಿಕತೆಯನ್ನು ಯುವ ಜಾನಾಂಗ ಪಾಲಿಸಿದರೆ ಸಾಕು ಮೌಢ್ಯದ ಬುದ್ಧಿ ತಾನಾಗಿಯೇ ದೂರ ಸರಿಯಲಿದೆ ಎಂದು ತೀರ್ಥಶಾಲೆಯ ಸಂಸ್ಥಾಪಕ ಆಧ್ಯಕ್ಷ ಡಾ.ಪ್ರಕಾಶ್ ತಿಳಿಸಿದರು.
ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪುರವರ ಜಯಂತಿ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಪ್ಪಟ ಗ್ರಾಮೀಣ ಪ್ರತಿಭೆಯಾದ ಕುವೆಂಪು ಅವರ ಸಾಹಿತ್ಯವು ಸಮಸಮಾಜದ ಆಶಯವನ್ನು ಪ್ರತಿಪಾಧಿಸುವ ಸಾಹಿತ್ಯವಾಗಿದೆ.ಅವರ ಸಾಹಿತ್ಯದಲ್ಲಿ ವೈಚಾರಿಕತೆ ಮತ್ತು ವಿಶ್ವಮಾನವ ಸಂದೇಶ ಎಂದೆಂದಿಗೂ ಮನುಕುಲಕ್ಕೆ ನಾಂದಿಯಾಗಿದೆ. ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ, ಶುದ್ರತಪಸ್ವಿ, ಸ್ಮಶಾನ ಕುರುಕ್ಷೇತ್ರ, ಜಲಗಾರ, ಬೊಮ್ಮನಹಳ್ಳಿಯ ಕಿಂದರಿಜೋಗಿ ಸೇರಿದಂತೆ ಹಲವು ಉತೃಷ್ಟ ಕೃತಿಗಳನ್ನು ಬರೆದಿದ್ದಾರೆ. ಅವರ ಸಾಹಿತ್ಯ ಓದುವ ಮೂಲಕ ಓದಿ ಅರ್ಥ ಮಾಡಿಕೊಳ್ಳುವ ಅದರ ರಸಬನಿಯನ್ನು ಇತರರಿಗೆ ಹಂಚುವುದೇ ಜನ್ಮದಿನಕ್ಕೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.
ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿರುವ ಕುವೆಂಪು ರೈತಗೀತೆ,ಭಾರತ ಜನನಿಯ ತನುಜಾತೆಯಂತಹ ನಾಡಗೀತೆಯನ್ನು ಲೋಕಕ್ಕೆ ಸಮರ್ಪಿಸಿದ್ದಾರೆ.ಈ ಗೀತೆ ಶತಮಾನೋತ್ಸವ ಕಾಣುತ್ತಿರುವುದು ಸಂತಸದ ಸಂಗತಿ. ಇಂತಹ ಪುಟ್ಟಪ್ಪನವರು ಸಾಹಿತ್ಯ ಲೋಕದ ದೊಡ್ಡಪ್ಪ, ವೈಚಾರಿಕ ವಿಚಾರವಾದಿ, ಸಾಮಾಜಿಕ ತತ್ವಜ್ಞಾನಿ ಮತ್ತು ಶ್ರೇಷ್ಠ ಮಾನವತಾವಾದಿ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಎಂ ಶೋಭಾ ಮಾತನಾಡಿ,ಪೋಷಕರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕುವೆಂಪುರವರ ಸಾಹಿತ್ಯ ವನ್ನು ಓದಬೇಕು ಮತ್ತು ಅವರ ನಾಟಕಗಳನ್ನು ನೋಡಿ ಆಧುನಿಕತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆ ಯನ್ನು ಅರ್ಥೈಸಿಕೊಳ್ಳಬೇಕು. ಪುಟ್ಟಪ್ಪನವರ ಪುಟ್ಟ ಕಥೆಗಳನ್ನು ಪರಾಮರ್ಶೆ ಮಾಡಿ ಅದರಲ್ಲಿ ಅಡಗಿರುವ ಮೌಲ್ಯಗಳನ್ನು ನಾವುಗಳು ಬೆಳೆಸಿಕೊಳ್ಳಬೇಕೆಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಭಾರ್ಗವಿ, ಸಾಯಿ ಪ್ರಿಯ,ಸಂಧ್ಯಾ, ಚಂದ್ರಮ್ಮ ಮತ್ತು ಪುಟಾಣಿಗಳು ಉಪಸ್ಥಿತರಿದ್ದರು.