Wednesday, 14th May 2025

Chikkaballapur News: ಪಾರ್ವತೀಪುರ ತಾಂಡಾದಲ್ಲಿ ಬೀದಿನಾಯಿಗಳ ದಾಳಿಗೆ 6 ಕುರಿ ಬಲಿ

ಬಾಗೇಪಲ್ಲಿ: ಕುರಿ ಕೊಟ್ಟಿಗೆಯ ಮೇಲೆ ಏಕಾಏಕಿ ಬೀದಿ ನಾಯಿಗಳ ದಂಡು ದಾಳಿ ನಡೆಸಿ,ಆರು ಕುರಿಗಳನ್ನು ಕೊಂದು, ಹಲವು ಕುರಿಗಳಿಗೆ ಗಾಯಗೊಳಿಸಿದ ಘಟನೆ ತಾಲೂಕಿನ ಗೂಳೂರು ಹೋಬಳಿಯ ಪಾರ್ವತಿಪುರ ತಾಂಡಾದಲ್ಲಿ ಸೋಮವಾರ ನಡೆದಿದೆ.

ತಾಂಡಾದ ಶಂಕರ್ ನಾಯ್ಕ್ ಎಂಬುವವರು ತಮ್ಮ ಜೀವನಾಧಾರವಾಗಿ ಕುರಿಗಳನ್ನೆ ನಂಬಿಕೊ0ಡಿದ್ದರು. ಎಂದಿನ0ತೆ ಬೆಳಗ್ಗೆ ಕೊಟ್ಟಿಗೆಯಲ್ಲಿ ಹಾಕಿದ್ದಾಗ, ಹತ್ತಕ್ಕೂ ಹೆಚ್ಚು ಬೀದಿನಾಯಿಗಳು ಕುರಿ ಮಂದೆ ಮೇಲೆ ದಾಳಿ ನಡೆಸಿವೆ. ಈ ವೇಳೆ ಕುರಿಗಳು ಚಲ್ಲಾಪಿಲ್ಲಿಯಾಗಿ ಓಡಲು ಪ್ರಯತ್ನಿಸಲು ಪ್ರಯತ್ನಿಸಿದಾಗ ಆರು ಕುರಿಗಳನ್ನು ತೀವ್ರವಾಗಿ ಗಾಯಗೊಳಿಸಿ, ಸಾಯಿಸಿವೆ. ಇನ್ನು ಹಲವಾರು ಕುರಿಗಳಿಗೆ ಗಾಯಗೊಳಿಸಿವೆ. ಈ ಘಟನೆಯಿಂದ ಶಂಕರ್ ನಾಯ್ಕ್ ತಮ್ಮ ಬದುಕಿನಾಸರೆಯ ಮೇಲೆ ಪೆಟ್ಟು ಬಿದ್ದಿದ್ದು,ಕಂಗಾಲಾಗಿದ್ದಾನೆ. ಸರಕಾರವು ಸೂಕ್ತ ರೀತಿಯಲ್ಲಿ ಪರಿಹಾರ ನೀಡುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: chikkaballapurnews