Wednesday, 14th May 2025

Chikkaballapur News: ಪೊಲೀಸ್ ಠಾಣೆಯ ಎದುರಿನ ವಸತಿಗೃಹದಲ್ಲಿ ಮಹಿಳೆ ಶವವಾಗಿ ಪತ್ತೆ-ಸಾವಿನ ಸುತ್ತ ಅನುಮಾನದ ಹುತ್ತ

ಚಿಕ್ಕಬಳ್ಳಾಪುರ: ನಗರದ ಎಂ.ಜಿ.ರಸ್ತೆಯಲ್ಲಿರುವ ಗ್ರಾಮಾಂತರ ಪೋಲಿಸ್ ಠಾಣೆ ಎದುರುಗಡೆಯಿರುವ ಇರುವ ಕಾವೇರಿ ಹೆಸರಿನ ಖಾಸಗಿ ಲಾಡ್ಜ್ನಲ್ಲಿ ಅನುಮಾನಾಸ್ಪದವಾಗಿ ಮೃತರಾದ ಮಹಿಳೆ ಶವ ಪತ್ತೆ ಆಗಿರುವ ಘಟನೆ ಸೋಮವಾರ ನಡೆಸಿದೆ.

ಸದರಿ ವಸತಿಗೃಹಕ್ಕೆ ಭಾನುವಾರ ರಾತ್ರಿ ಬಂದ ಜೋಡಿಯೊಂದು, ರೂಮ್ ಮಾಡಿಕೊಂಡು ರಾತ್ರಿಯಿಡಿ ತಂಗಿದ್ದಾರೆ. ಆದರೆ ಸೋಮವಾರ ಬೆಳಿಗ್ಗೆ ಪುರುಷ ಮಾತ್ರ ಆಚೆ ಬಂದಿದ್ದಾನೆ. ಮಹಿಳೆ ಹೊರಗೆ ಬಂದಿಲ್ಲ. ಇದರಿಂದ ಅನುಮಾನ ಗೊಂಡ ವಸತಿಗೃಹದ ಸಿಬ್ಬಂದಿ, ಹೋಗಿ ನೋಡಿದಾಗಲೇ ರೂಮಿನಲ್ಲಿ ಮಹಿಳೆ ಶವವಾಗಿ ಬಿದ್ದಿರುವುದು ಪತ್ತೆ ಯಾಗಿದೆ.

ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಸ್ಥಳ ಪರಿಶೀಲನೆ ನಡೆಸಿದ್ದು, ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಎಸ್ಪಿ ಕುಶಾಲ್ ಚೌಕ್ಸೆ ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ, ಆಕೆಯ ಜೊತೆ ಬಂದಿದ್ದ ವ್ಯಕ್ತಿ ಚಿಕ್ಕಬಳ್ಳಾಪುರ ತಾಲೂಕು ಮೂಲದ ನರಸಿಂಹಮೂರ್ತಿ ಎನ್ನಲಾಗಿದೆ. ಲಾಡ್ಜ್ ಸಿಬ್ಬಂದಿ ರೂಮ್ ಬುಕ್ ಮಾಡುವಾಗ ಯಾವುದೆ ದಾಖಲೆ ಪಡೆದಿಲ್ಲ, ಹೆಸರು ವಿಳಾಸ ಪಡೆದುಕೊಂಡಿಲ್ಲ, ಹೀಗಾಗಿ ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದರು.