ಬಾಗೇಪಲ್ಲಿ:“ಆತ್ಮೀಯ ಸ್ನೇಹಿತರಾಗಿದ್ದ ಬಯ್ಯಾರೆಡ್ಡಿಯವರು ದೇಶದ ರೈತರ ಕಾರ್ಮಿಕರ,ದಲಿತರ,ಕೂಲಿ ಕಾರ್ಮಿಕರ, ಮಹಿಳೆಯರ, ಹಾಗೂ ಅಲ್ಪ ಸಂಖ್ಯಾತರ ಆಗುತ್ತಿರುವ ಅನ್ಯಾಯದ ಬಗ್ಗೆ ಸದಾ ಚರ್ಚಿಸುತ್ತಿದ್ದ ಸಿಪಿಐ(ಎಂ) ನಾಯಕ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿರುವುದು ನೋವಿನ ಸಂಗತಿಯಾಗಿದೆ ಎಂದು ಮುನಿವೆಂಕಟಪ್ಪ ತಿಳಿಸಿದ್ದಾರೆ.
“ಆತ್ಮೀಯ ಸ್ನೇಹಿತರಾಗಿದ್ದ ಬಯ್ಯಾರೆಡ್ಡಿಯವರು ದೇಶದ ರೈತರ ಕಾರ್ಮಿಕರ,ದಲಿತರ,ಕೂಲಿ ಕಾರ್ಮಿಕರ, ಮಹಿಳೆಯರ, ಹಾಗೂ ಅಲ್ಪ ಸಂಖ್ಯಾತರ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದರು. ಈ ಸಮುದಾಯಗಳಿಗೆ ನ್ಯಾಯ ಕೊಡಿಸಲು ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದ ಬಯ್ಯಾರೆಡ್ಡಿಯವರು ಓರ್ವ ದಣಿವರಿಯದ ಜನಪರ ಹೋರಾಟಗಾರನ್ನು ನಾವು ಕಳೆದುಕೊಂಡಿದ್ದೆವೆ ಎಂದು ಕಂಬನಿ ಮಿಡಿದಿದ್ದಾರೆ.
ಕರ್ನಾಟಕದ ಐಕ್ಯ ಹೋರಾಟಕ್ಕೆ ಬಲ ತುಂಬಿದ ಜೆ.ಸಿ.ಬಯ್ಯರೆಡ್ಡಿಯವರ ನಿಧನ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಗೂ ಕರ್ನಾಟಕದ ಚಳುವಳಿಗೆ ತುಂಬಲಾರದ ನಷ್ಟ. ಅವರು ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತಾ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಹಾಗೂ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಎಂದು ಸಿಪಿಐಎಂ ಪಕ್ಷದ ಮುಖಂಡರಾದ ಮುನಿ ವೆಂಕಟಪ್ಪ ಹಾಗೂ ರಘುರಾಮ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.