Sunday, 11th May 2025

Chikkaballapur Crime: ಸರಗಳ್ಳನ ಬಂಧನ 5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಬಾಗೇಪಲ್ಲಿ: ಪಟ್ಟಣದ ಪೊಲೀಸರು ಶನಿವಾರ ಭರ್ಜರಿ ಭೇಟೆಯಾಡಿದ್ದು, ಮನೆಗಳ್ಳತನ ಮತ್ತು ಬೈಕ್ ಗಳ ಕಳ್ಳತನ ಮಾಡುತ್ತಿದ್ದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಫೆ.೫ ರಂದು ಬೈರೆಡ್ಡಿ ಎಂಬುವವರ ಮನೆಯಲ್ಲಿ ೮ ಸಾವಿರ ನಗದು ಮತ್ತು ಚಿನ್ನಾಭರಣ, ಹಾಗೆಯೆ ಫೆ.೬ ರಂದು ಶಿವಕುಮಾರ್ ಎಂಬುವವರ ಮನೆಯಲ್ಲಿ ಚಿನ್ನದ ಒಡವೆ ಮತ್ತು ನಗದು ಕಳ್ಳತನವಾಗಿರುವ ಬಗ್ಗೆ ದೂರನ್ನು ನೀಡಿರುತ್ತಾರೆ.

ಈ ಪ್ರಕರಣಗಳನ್ನು ಬೇದಿಸಲು ಪ್ರತ್ಯೇಕ ತಂಡಗಳನ್ನು ರಚಿಸಿದ ಎಸ್ಪಿ ಕುಶಾಲ್ ಚೌಕ್ಸೆ, ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡು ವೆಂಕಟೇಶ್ ಬಾಬು ಮತ್ತು ಸುರೇಶ್ ಎಂಬ ಆಂಧ್ರಪ್ರದೇಶದ ಆರೋಪಿಗಳನ್ನು ದಸ್ತಗಿರಿ ಮಾಡಿ ದ್ದಾರೆ. ಆರೋಪಿಗಳಿಂದ ೫೮ ಗ್ರಾಂ ತೂಕದ ೪ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜಾ ಇಮಾಮ್ ಖಾಸೀಂ ಮತ್ತು ಡಿವೈಎಸ್ಪಿ ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸ್ ಪೆಕ್ಟರ್ ಪ್ರಶಾಂತ್ ಆರ್ ವರ್ಣಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಅಪರಾಧ ವಿಭಾಗದ ಎ ಮುನಿರತ್ನಂ ಪಿ ಹಾಗೂ ಸಿಬ್ಬಂದಿಯವರಾದ ವೆಂಕಟರವಣ, ಸುರೇಶ,ಮೋಹನ್ ಕುಮಾರ್, ಧನಂಜಯ ಕುಮಾರ್, ಸಾಗರ್, ಅನಿಲ್ ಕುಮಾರ್,ಕೃಷ್ಣಪ್ಪ,, ಶಂಕರಪ್ಪ,ರಾಜಪ್ಪ ಮತ್ತು ಚಾಲಕ ನೂರ್ ಬಾಷಾ ಹಾಗೂ ತಾಂತ್ರಿಕ ಸಿಬ್ಬಂದಿಯಾದ ರವಿಕುಮಾರ್, ಮುರಳಿ ಕೃಷ್ಣಪ್ಪರವರು ಆರೋಪಿಗಳು ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಕಾರ್ಯಚರಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಎಸ್ಪಿಯವರು ಶ್ಲಾಘಿಸಿದ್ದಾರೆ.