ಗೌರಿಬಿದನೂರು: ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಗೌರಿಬಿದನೂರು ಪೊಲೀಸರು ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಪುಂಡರನ್ನು ಬೆನ್ನತ್ತಿದ ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದಿದೆ.
ವೀಲ್ಹಿಂಗ್ ಮಾಡುತ್ತಿದ್ದ ಆರೋಪಿಗಳನ್ನು ಗೌರಿಬಿದನೂರು ನಗರದ ಅಬ್ದುಲ್ ರೆಹಮಾನ್ ಬಿನ್ ಬಾಬಾ ಫಕ್ರು ದ್ದೀನ್, ಮುಭಾರಕ್ ಬಿನ್ ಅಲ್ಲಾಬಕಾಷ್, ಕಾರ್ತಿಕ್ ಬಿನ್ ಲೇ ಚೌಡಪ್ಪ ಎಂದು ತಿಳಿದು ಬಂದಿದೆ.
ತಾಲೂಕಿನ ಇಡಗೂರು ರಸ್ತೆ ಮುರಾಜಿ ದೇಸಾಯಿ ಶಾಲೆಯ ಕಡೆ ಅಪರಾಧ ಸಿಬ್ಬಂದಿ ಅಶ್ವತ್ಥಪ್ಪ, ನವೀನ್ ಕುಮಾರ್ ಗಸ್ತು ಮಾಡುತ್ತಿದ್ದ ವೇಳೆ ೩ ಜನ ಏಂ ೦೧ ಊಆ ೯೨೦೮ ಹಾಗೂ ನೊಂದಣಿ ಸಂಖ್ಯೆಯಿಲ್ಲದ ದ್ವಿಚಕ್ರ ವಾಹನ ಗಳಲ್ಲಿ ವೀಲ್ಹಿಂಗ್ ಮಾಡಿಕೊಂಡು ರಸ್ತೆಯಲ್ಲಿ ಹೋಗುವವರಿಗೆ ತೊಂದರೆ ಕೊಡುತ್ತಿದ್ದರು. ಇದನ್ನು ಗಮನಿಸಿದ ಸಿಬ್ಬಂದಿ ಮೂವರು ಪುಂಡರನ್ನು ಸೆರೆಹಿಡಿದು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮ ಕೈಗೊಂಡು ಬೈಕ್ ವೀಲ್ಹಿಂಗ್ ಮಾಡುವ ಪುಂಡರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: chikkanayakanahalli