ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಲ್ಲಿ ಕ್ರಾಸ್ ಬಳಿ ಘಟನೆ
ಚಿಂತಾಮಣಿ: ಅತಿ ವೇಗದಿಂದ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪತಿ ಸಾವನ್ನಪ್ಪಿದ್ದು ಪತ್ನಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಬೆಳಗ್ಗೆ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಲ್ಲಿ ಕ್ರಾಸ್ ಬಳಿ ಸಂಭವಿಸಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿ ಗ್ರಾಮದ ನಯಾಜ್ ಬಿನ್ ಇಬ್ರಾಹಿಂ ಸಬ್(೪೫ ವರ್ಷ)ಎಂದು ಗುರುತಿಸಲಾಗಿದೆ.
ನಯಾಜ್ ಹಾಗೂ ಅವರ ಪತ್ನಿ ತನ್ನ ದ್ವಿಚಕ್ರ ವಾಹನದಲ್ಲಿ ಗೌನಪಲ್ಲಿ ಯಿಂದ ಚಿಂತಾಮಣಿಯಲ್ಲಿರುವ ಅವರ ಮಗಳ ಮನೆಗೆ ಕಡಪ ಹೈವೇ ರಸ್ತೆ ಮುಖಾಂತರ ಬರುತ್ತಿದ್ದ ವೇಳೆ ಬೆಂಗಳೂರಿನಿAದ ಮದನಪಲ್ಲಿ ಕಡೆಗೆ ಹೋಗು ತ್ತಿದ್ದ ಕಾರು ಚಾಲಕನ ಅತಿ ವೇಗ ಹಾಗೂ ಅಜಾಗೂರುಕತೆಯಿಂದ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪತಿ ಪತ್ನಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.ಇಬ್ಬರನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದ ವೇಳೆ ಪತಿ ನಯಾಜ್ ಮೃತಪಟ್ಟಿದ್ದಾನೆ ಹಾಗೂ ಪತ್ನಿ ಕೋಲಾರದ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ.
ಘಟನೆಯ ವಿಷಯ ತಿಳಿದ ತಕ್ಷಣ ಕೆಂಚರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.