Saturday, 10th May 2025

ಬಾವಿಗೆ ಬಿದ್ದ ಕಾರು: ಓರ್ವ ಸಾವು

ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ಕಾರು ಬಾವಿಗೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಮೈನಳ್ಳಿ ಬಳಿ ಸಂಭವಿಸಿದೆ. ಮೃತರನ್ನು ಬದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಸಂಗಮೇಶ ಹಿರೇಮಠ (26) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಹರಿಹರ ಮೂಲದ ವಿಶ್ವಜೀತ ಶಿಂದೆ, ಅರುಣ್ ರೆಡ್ಡಿ ಹಾಗೂ ಕಿರಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ನಾಲ್ಕು ಜನರು ಹರಿಹರದಿಂದ ಕೊಪ್ಪಳಕ್ಕೆ ಮದುವೆಗೆ ಬರುತ್ತಿದ್ದರು.

ಬೆಳಗ್ಗೆಯಿಂದ ಬಾವಿಯಿಂದ ಶವ ಹಾಗೂ ಕಾರನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮೇಲೆ ಎತ್ತಿದ್ದಾರೆ. ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.