ಗುಬ್ಬಿ: ಜೆಡಿಎಸ್ ಮತ್ತು ವಾಸಣ್ಣನವರ ವೈಮನಸ್ಯದಿಂದ ಅಧಿಕಾರ ಹಿಡಿಯಬಹುದೆಂದು ಬಿಜೆಪಿ ಮುಖಂಡರು ಭ್ರಮೆ ಯಲ್ಲಿದ್ದಾರೆ ಎಂದು ಮುಖಂಡ ಕೆ ಆರ್ ವೆಂಕಟೇಶ್ ತಿಳಿಸಿದರು.

ಗ್ರಾ ಪಂ ಸದಸ್ಯೆ ವತ್ಸಲ ಮಾತನಾಡಿ, ಎಲ್ಲಿ ಬೆಲೆ ಇಲ್ಲವೋ ಅಲ್ಲಿ ವಾಸಣ್ಣನವರು ಇರುವುದಕ್ಕೆ ಇಷ್ಟಪಡುವುದಿಲ್ಲ ಅವರ ಅನುಯಾಯಿಗಳಾದ ನಾವು ಸಹ ಇರುವುದಿಲ್ಲ ವಾಸಣ್ಣನವರು ತಾಲೂಕಿನ ಶಕ್ತಿ ಯಾವತ್ತೂ ಅವರನ್ನು ಜನತೆ ಬಿಟ್ಟು ಕೊಡುವುದಿಲ್ಲ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರು ಅವರನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದರು.
ಗ್ರಾ ಪಂ ಸದಸ್ಯ ತಿಮ್ಮೇಗೌಡ ಮಾತನಾಡಿ ಜೆಡಿಎಸ್ ಕುಟುಂಬ ಮಾಡಿಕೊಂಡು ಬರುತ್ತಿದ್ದು ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ ನೆಪ ಮಾತ್ರಕ್ಕೆ ವಾಸಣ್ಣನವರನ್ನು ಮಂತ್ರಿ ಮಾಡಿ ಅಧಿಕಾರ ಕೊಡದೆ ನೋಯಿಸಿದ್ದಾರೆ ತಾಲೂಕಿನ ಜನತೆ ಮತ್ತೆ ಮಂತ್ರಿ ಮಾಡುವ ಮೂಲಕ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.
ಮುಖಂಡ ರಾಜಣ್ಣ ಮಾತನಾಡಿ ವಾಸಣ್ಣನವರು ಕಾಂಗ್ರೆಸ್ ಗೆ ಬರುತ್ತಿರುವುದು ಈ ಭಾಗದ ಎಲ್ಲಾ ಕಾರ್ಯಕರ್ತರಿಗೂ ಸಂತೋಷದ ವಿಷಯವಾಗಿದೆ ಇಷ್ಟು ವರ್ಷಗಳ ನಂತರ ಗುಬ್ಬಿಯಲ್ಲಿ ಕಾಂಗ್ರೆಸ್ ಬಾವುಟ ಹಾರಲಿದೆ ತಾರತಮ್ಯ ಮರೆತು ವಾಸಣ್ಣನವರನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಚ್ಚಟಿತ ಜೆಡಿಎಸ್ ಅಧ್ಯಕ್ಷ ಗುರು ರೇಣುಕಾರಾಧ್ಯ, ಗ್ರಾ ಪಂ ಅಧ್ಯಕ್ಷ ಸಿದ್ದರಾಜು, ಗ್ರಾ ಪಂ ಸದಸ್ಯರಾದ ರಮೇಶ್, ತಿಮ್ಮೇಗೌಡ, ರಾಜಣ್ಣ, ಬಿ ಡಿ ರಾಜಣ್ಣ, ಮಮತ ಬೊಮ್ಮಣ್ಣ , ಪುಟ್ಟಮ್ಮ ಲಕ್ಕಣ್ಣ, ಬಸವರಾಜು, ಗಂಗಣ್ಣ ಕೆಂಪ ರಂಗಮ್ಮ, ಮುಂತಾದವರಿದ್ದರು.
Read E-Paper click here