Monday, 12th May 2025

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಸ್.‌ಮನೋಹರ್ ರಾಜೀನಾಮೆ

ಬೆಂಗಳೂರು: ರಾಜಾಜಿನಗರ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್.‌ಮನೋಹರ್ ಈಗ ತಮ್ಮ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿ.ಸೋಮಣ್ಣ ಅಥವಾ ಎಂಎಲ್ಸಿ ‌ಪುಟ್ಟಣ್ಣ ಕಾಂಗ್ರೆಸ್ ಸೇರ್ತಾರೆ ಎಂಬ ಚರ್ಚೆ ಆರಂಭವಾಗಿ ಅವರಲ್ಲಿ ಯಾರಿ ಗಾದರೂ ಒಬ್ಬರಿಗೆ ಟಿಕೆಟ್ ಕೊಡ್ತಾರೆ ಎನ್ನುವ ಅನುಮಾನ ಹುಟ್ಟಿತ್ತು. ಈ ರೀತಿಯ ಚರ್ಚೆ ಹುಟ್ಟಿಕೊಂಡ ಹಿನ್ನೆಲೆ ಯಲ್ಲಿ ಎಸ್‌ ಮನೋಹರ ಎಐಸಿಸಿ‌ ಅಧ್ಯಕ್ಷ ‌ಮಲ್ಲಿಕಾರ್ಜುನ್ ಖರ್ಗೆಗೆ ಪತ್ರ ಬರೆದು ರಾಜೀನಾಮೆ ನೀಡಿದ್ದಾರೆ.

ತಮ್ಮ ರಾಜೀನಾಮೆಯಲ್ಲಿ ಎಸ್ ಮನೋಹರ, ಕಾರ್ಯಕರ್ತರನ್ನ ಮೂಲೆ ಗುಂಪು ಮಾಡಲಾಗುತ್ತಿದೆ. ನಿತ್ಯ ಹೋರಾಟ ನಡೆಸಿ, ಕೇಸ್ ಹಾಕಿಸಿಕೊಂಡ ಕಾರ್ಯಕರ್ತರನ್ನ ಮೂಲೆಗುಂಪು ಮಾಡಲಾಗುತ್ತಿದೆ.

ಅನ್ಯ ಪಕ್ಷದಿಂದ ಬರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಪಕ್ಷದ ಬಗ್ಗೆ ಅವಹೇಳನಕಾರಿ ಮಾತನಾಡಿದ ಕೆ.ಜಿ‌.ಎಫ್ ಬಾಬುನ ಮರಳಿ ಪಕ್ಷಕ್ಕೆ ಸೇರಿಸಿಕೊಂಡಿದ್ದು ನಿಷ್ಠಾವಂತ ಕಾರ್ಯಕರ್ತರ ಕಡಗಣನೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.