Monday, 12th May 2025

ಸಿದ್ದರಾಮಯ್ಯ ನಿವಾಸಕ್ಕೆ ಲಕ್ಷ್ಮಣ್‌ ಸವದಿ ಆಗಮನ

ಬೆಂಗಳೂರು: ಅಥಣಿ ಕ್ಷೇತ್ರದಲ್ಲಿ ಟಿಕೆಟ್‌ ಮಿಸ್‌ ಆದ ಬೆನ್ನಲ್ಲೆ ಬಿಜೆಪಿಗೆ ರಾಜೀನಾಮೆ ನೀಡಿದ ಲಕ್ಷ್ಮಣ್‌ ಸವಧಿ ಬೆಂಗಳೂರಿನ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸುರ್ಜೇವಾಲ ಜೊತೆ ಒಂದೇ ಕಾರಿನಲ್ಲಿ ಲಕ್ಷ್ಮಣ್‌ ಸವಧಿ ಆಗಮಿಸಿದ್ದಾರೆ.

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿಕೆ ನೀಡಿದ ಬೆನ್ನಲ್ಲೆ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಡೆಯುತ್ತಿದೆ. ಬೆಂಗಳೂರಿನ ಸಿದ್ದರಾಮಯ್ಯ ನಿವಾಸಕ್ಕೆ ಲಕ್ಷ್ಮಣ್‌ ಸವಧಿಯವರನ್ನು ಡಿಕೆಶಿ ಅವರು ಕರೆ ತಂದಿದ್ದಾರೆ.