Saturday, 10th May 2025

Self Harming: ಪೋಸ್ಟ್ ಮಾರ್ಟಂ ಬೇಡ, ತನಿಖೆ ಬೇಡ! ಸಾಯುವ ಮುನ್ನ ಯುವತಿ ವಿಚಿತ್ರ ಡೆತ್‌ ನೋಟ್

self harming

ಬೆಂಗಳೂರು: ವಿಚಿತ್ರವಾದ ಡೆತ್ ನೋಟ್‌ (Death note) ಒಂದನ್ನು ಬರೆದಿಟ್ಟು ಯುವತಿಯೊಬ್ಬರು ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶ ಮೂಲದ ಯುವತಿ ಬೆಂಗಳೂರಿನಲ್ಲಿ (Bangalore news) ಡೆತ್‌ನೋಟ್‌ ಬರೆದಿಟ್ಟು ಪಿಜಿ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವತಿ ಗುರುವಾರ ತಾನು ಇದ್ದ ಪಿಜಿಯ ಐದನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೂ ಮುನ್ನ ಈ ಯುವತಿ ಬರೆದಿಟ್ಟಿರುವ ಪತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಕಡಪ ಮೂಲದ ಗೌತಮಿ ಎನ್ನುವ ಯುವತಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಟಿಸಿಎಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ನಿನ್ನೆ ಸಂಜೆ ಏಳು ಗಂಟೆಯಲ್ಲಿ ವೈಟ್​ಫೀಲ್ಡ್​ (Whitefield)ನ ಪ್ರಶಾಂತ್ ಲೇಔಟ್​ನಲ್ಲಿ ಘಟನೆ ನಡೆದಿದೆ. ಪಿಜಿಯ ಐದನೇ ಮಹಡಿಯಿಂದ ಹಾರಿ ಗೌತಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳವ ಮುನ್ನ ಗೌತಮಿ ಡೆತ್​ನೋಟ್​ ಬರೆದಿಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟ್​ ಬರೆದಿಟ್ಟಿದ್ದು, ‘ನನ್ನ ಮೃತ ದೇಹವನ್ನು ಪಿಎಂ(ಪೋಸ್ಟ್​ ಮಾರ್ಟಂ) ಮಾಡಬೇಡಿ. ಯಾವುದೇ ರೀತಿಯ ತನಿಖೆ ಸಹ ನಡೆಸಬೇಡಿ. ನನ್ನ ಪೋಷಕರಿಗೆ‌ ನನ್ನ ಮೃತ ದೇಹ ನೀಡಿʼ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder for Iphone: ಐಫೋನ್ ನೀಡಲು ಬಂದ ಡೆಲಿವರಿ ಬಾಯ್‍ ಕೊಲೆಯಾಗಿದ್ದು ಹೇಗೆ?