Saturday, 10th May 2025

ಅನಿವಾಸಿ ಭಾರತೀಯ ಉದ್ಯಮಿ ಬಳಿ ಕ್ಷಮೆ ಕೋರಿದ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಿ

ಬೆಂಗಳೂರು: ಬೆಂಗಳೂರಿನಲ್ಲಿ ತಮ್ಮ ಕಂಪನಿ ನೋಂದಣಿ ಮಾಡಲು ತುಂಬಾ ತಡವಾಗುತ್ತಿದೆ, ಸಹಕಾರ ಸಿಗುತ್ತಿಲ್ಲ, ವಾಪಸ್ ಅಮೆರಿಕಗೆ ತೆರಳಬೇಕಾಗ ಬಹುದು ಎಂದಿದ್ದ ಅನಿವಾಸಿ ಭಾರತೀಯ ಉದ್ಯಮಿ ಬಳಿ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕ್ಷಮೆ ಕೇಳಿದ್ದಾರೆ.

ಯುಎಸ್‌ನ ಎಐ (AI) ಉದ್ಯಮದ ಎನ್‌ಆರ್‌ಐ ಬ್ರಿಜ್ ಸಿಂಗ್, ಕಂಪನಿ ನೋಂದಾಯಿಸುವಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದರು. ತನಗೆ ಬೇಸರ ವಾಗುತ್ತಿದೆ, ಬೆಂಗಳೂರು ತೊರೆದು ವಾಪಸ್ ಹೋಗಬೇಕಾಗಬಹುದು ಎಂದು ಹೇಳಿದ್ದರು.

ಬ್ರಿಜ್ ಸಿಂಗ್ ತಮ್ಮ ಟ್ವೀಟ್‌ನಲ್ಲಿ ಬೆಂಗಳೂರು/ಭಾರತವನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರು. “ಭಾರತದಲ್ಲಿ ತಮ್ಮ ಕಂಪನಿ ನೋಂದಣಿ ಮಾಡಲು ಎರಡು ತಿಂಗಳುಗಳಿಂದ ಪ್ರಯತ್ನ ಪಡುತ್ತಿದ್ದೇನೆ, ಆದರೂ ನೋಂದಣಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಸಂಭಾವ್ಯ ಗ್ರಾಹಕರು, ಹೂಡಿಕೆದಾರರು ಮತ್ತು ಸಹ ಸಂಸ್ಥಾಪಕರಿಂದ ಸಮಸ್ಯೆ-ಪರಿಹಾರ ಪ್ರತಿಕ್ರಿಯೆ ವಿಭಿನ್ನ ಮಟ್ಟದಲ್ಲಿದೆ. ನಾನು ಯುಎಸ್‌ಗೆ ಹಿಂತಿರುಗಲು ಸಮಯ ಬರಬಹುದು. ಭಾರವಾದ ಹೃದಯದಿಂದ ಇದನ್ನು ಹೇಳುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದರು.

ಬ್ರಿಜ್ ಸಿಂಗ್ ಅವರ ಟ್ವೀಟ್‌ ಬಗ್ಗೆ ಹಲವು ಸುದ್ದಿಗಳು ಮಾಧ್ಯಮದಲ್ಲಿ ಪ್ರಕಟವಾಗಿದ್ದವು. ಟ್ವೀಟ್‌ ಅನ್ನು ಗಮನಿಸಿದ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಉದ್ಯಮಿ ಬ್ರಿಜ್ ಸಿಂಗ್ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *