Tuesday, 13th May 2025

ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಎಂಟ್ರಿ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೂಪರ್ ಸರ್‌ಪ್ರೈಸ್ ಆಗಿ ಭರ್ಜರಿ ಗೆಲುವು ಸಾಧಿಸಿ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಇದೀಗ ಬಿಗ್ ಬಾಸ್ ಮನೆ ಎಂಟ್ರಿಗೆ ಸಜ್ಜಾಗಿದ್ದಾರೆ.

ತಮ್ಮ ಪಂಚಿಂಗ್ ಡೈಲಾಗ್ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿರುವ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಎಂಟ್ರಿ ಆಗುತ್ತಿರುವ ಮೊದಲ ಜನಪ್ರತಿನಿಧಿ ಎನ್ನುವ ಹೊಸ ದಾಖಲೆಯನ್ನು ಬರೆದಿದ್ದಾರೆ. ನಟ ಸುದೀಪ್ ನಡೆಸಿಕೊಡಲಿರುವ ಬಿಗ್ ಬಾಸ್ ಮನೆಗೆ ಸೋಮವಾರ ಎಂಟ್ರಿ ಕೊಡಲಿರುವ ಪ್ರದೀಪ್ ಈಶ್ವರ್ ಅವರು, ತಮ್ಮ ಖಡಕ್ ಹೇಳಿಕೆಗಳ ಮೂಲಕ ದೊಡ್ಮನೆಯಲ್ಲಿ ಹೊಸ ಸದ್ದು ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ.

ಚಿಕ್ಕಬಳ್ಳಾಪುರದ ಪರೇಸಂದ್ರದಲ್ಲಿ ಜನಿಸಿದ ಪ್ರದೀಪ್ ಈಶ್ವರ್ ಅವರು ಪರಿಶ್ರಮ ನೀಟ್ ಅಕಾಡೆಮಿಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಸರಕಾರಿ ವೈದ್ಯಕೀಯ ಸೀಟು ಕೊಡಿಸುವ ಮೂಲಕ ಮನೆ ಮಾತಾಗಿದ್ದರು.

ಬಳಿಕ ತಮ್ಮ ಸ್ಪೂರ್ತಿದಾಯಕ ಮಾತುಗಳಿಂದಲೇ ಮನಗೆದ್ದ ಅವರು, ಅಚ್ಚರಿಯ ರೀತಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪ್ರಬಲ ಅಭ್ಯರ್ಥಿಯಾಗಿದ್ದ ಡಾ.ಕೆ.ಸುಧಾಕರ್ ಅವರನ್ನು ಮಣಿಸಿ ದ್ದರು. ಇದೀಗ ಬಿಗ್‌ಬಾಸ್ ಮನೆಯಲ್ಲಿ ಅವರು ಪ್ರದೀಪ್ ತಮ್ಮ ಜೀವನದ ಇನ್ನಷ್ಟು ಮಜಲುಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *