Sunday, 11th May 2025

ಮೇ.10, ಮೇ.13ರಂದು ಫಿಕ್ಸ್ ಆಗಿದ್ದ ಶುಭ ಸಮಾರಂಭಗಳ ರದ್ದು

ಬೆಂಗಳೂರು : ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಮೇ.10ರಂದು ಮತದಾನ, ಮೇ.13 ರಂದು ಮತ ಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.

ಸುಮಾರು ದಿನಗಳ ಹಿಂದೆಯೇ ಮದುವೆ ದಿನಾಂಕಗಳು ನಿಗದಿಯಾಗಿತ್ತು ಆದ್ರೆ ಇದೀಗ ಚುನಾವಣಾ ಡೇಟ್‌ ಫಿಕ್ಸ್‌ ಆದಾಗಿನಿಂದ ಮದುವೆ ಸಮಾರಂಭಗಳ ದಿನಾಂಕವೂ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಯಾಕೆಂದರೆ ಚುನಾವಣೆ ಇರುವ ಕಾರಣಕ್ಕಾಗಿ ಅದೇಷ್ಟೋ ಜನರು ಮದುವೆ ಸಮಾರಂಭಕ್ಕೆ ಬರಲು ಹಿಂದೇಟು ಹಾಕುತ್ತಾರೆ, ಅಲ್ಲದೇ ಊರಿಂದ ಊರಿಗೆ ತೆರಳಬೇಕಾದವರಿಗೂ ಸಂಕಷ್ಟ ಎದುರಾಗಿದೆ.

ಈ ಕಾರಣದಿಂದಾಗಿ ರಾಜ್ಯದ ಮಂಗಳೂರಿನ ವಿಟ್ಟಲ್‌ನ ನಿಕಿತ್ ಮಸ್ಕರೇನ್ಹಸ್ ಮಾತನಾಡಿ, ನನ್ನ ವಿವಾಹ ಸಮಾರಂಭವನ್ನು ಕ್ರಮವಾಗಿ ಮೇ 10 ಮತ್ತು ಮೇ 13 ರಂದು ನಿಗದಿಪಡಿಸಿದ್ದೆ, ಆದರೆ ಈಗ ಕಾರ್ಯಕ್ರಮಗಳನ್ನು ಒಂದು ವಾರ ಮುಂದೂಡಿ ಹೊಸ ದಿನಾಂಕ ಫಿಕ್ಸ್‌ ಮಾಡಿದ್ದೇನೆ ಎಂದಿದ್ದಾರೆ.

ಹೊಸ ದಿನಾಂಕಕ್ಕೆ ಮದುವೆ ಸ್ಥಳ ಹುಡುಕುವುದು, ಫೋಟೋಗ್ರಾಫರ್‌ ಗೊತ್ತು ಮಾಡುವುದು ಮತ್ತೊಂದು ಕಷ್ಟ ಎಂದಿದ್ದಾರೆ.