Sunday, 11th May 2025

ನಾಳೆಯಿಂದ ಆಗಸ್ಟ್15 ರವರೆಗೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ

ಬೆಂಗಳೂರು: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಆಗಸ್ಟ್ 4 ರಿಂದ 15 ರವರೆಗೆ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಅವರ ಜೀವನ, ಸಾಧನೆ ಕುರಿತಂತೆ ಪುಷ್ಪ ನಮನ ಸಲ್ಲಿಸಲು ತೀರ್ಮಾನಿಸಲಾಗಿದೆ. ಆಗಸ್ಟ್ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸ ಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿರುವ ಕಾರ್ಯಕ್ರಮದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತೋಟಗಾರಿಕೆ ಸಚಿವರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತರಕಾರಿ ಕೆತ್ತನೆ ಮತ್ತು ಬೋನ್ಸಾಯ್ ಸ್ಪರ್ಧೆ ಗಳು ನಡೆಯಲಿವೆ.

ಲಾಲ್ ಬಾಗ್‌ನಲ್ಲಿ ಹತ್ತು ಹೂವಿನ ಪಿರಮಿಡ್‌ಗಳು ಇರುತ್ತವೆ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಹೇಳಿದರು.

ಪ್ರದರ್ಶನದಲ್ಲಿ 815 ಪ್ರದರ್ಶಕರು ಭಾಗವಹಿಸಲಿದ್ದು, 138 ಪ್ರದರ್ಶಕರು ಹೂವಿನ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಗಾರ್ಡನ್ ಸ್ಪರ್ಧೆಯಲ್ಲಿ 525 ಪ್ರದರ್ಶಕರು ಭಾಗವಹಿ ಸಲಿದ್ದು, 102 ಮಂದಿ ಗಾಜಿನ ಮನೆಯಲ್ಲಿ ಪ್ರದರ್ಶಿಸಲಿದ್ದಾರೆ.

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಲಾಲ್‌ಬಾಗ್‌ನ ಪಶ್ಚಿಮ ಗೇಟ್, ಈಸ್ಟ್ ಗೇಟ್ ಮತ್ತು ಸೌತ್ ಎಂಡ್ ಸರ್ಕಲ್‌ನಿಂದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ, ಜೆಸಿ ರಸ್ತೆ ಬಿಬಿಎಂಪಿ ಸಂಕೀರ್ಣ ಮತ್ತು ಲಾಲ್ ಬಾಗ್ ರಸ್ತೆಯ ಅಲ್ ಅಮೀನ್ ಕಾಲೇಜಿನಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಆಗಸ್ಟ್ 4ರಿಂದ ಆಗಸ್ಟ್ 15ರವರೆಗೆ ಪಲಫುಷ್ಪ ಪ್ರದರ್ಶನ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಇರುತ್ತದೆ. ಪ್ರವೇಶ ದರವನ್ನು ವಾರದ ದಿನಗಳಲ್ಲಿ ವಯಸ್ಕರಿಗೆ 70 ರೂಪಾಯಿ ಮತ್ತು ವಾರಾಂತ್ಯದಲ್ಲಿ 80 ರೂಪಾಯಿ ನಿಗದಿಪಡಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ 30 ರೂಪಾಯಿ ನಿಗದಿ ಮಾಡಲಾಗಿದೆ.

Leave a Reply

Your email address will not be published. Required fields are marked *