Monday, 12th May 2025

ನಾಳೆಯಿಂದ ಹಾಲು, ಮೊಸರಿನ ದರ: 3 ರೂ. ಹಚ್ಚಳ

ಬೆಂಗಳೂರು: ನಂದಿನಿ ಹಾಲು ಪ್ರತಿ ಲೀಟರ್​ಗೆ ಹಾಗೂ ಮೊಸರಿನ ದರ ಪ್ರತಿ ಕೆಜಿಗೆ 3 ರೂಪಾಯಿ ಹಚ್ಚಳ ಮಾಡಲಾಗಿದೆ. ನಾಳೆಯಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್​ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಹಕರು, ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು 3 ರೂ. ಹೆಚ್ಚಳ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲಿನ ಶೇಖರಣೆ ಕಡಿಮೆಯಾಗಿ, ಪ್ರಸ್ತುತ ದಿನವಹಿ ಅಂದಾಜು 10 ಲಕ್ಷ ಲೀಟರ್ ಹಾಲು ಶೇಖರಣೆ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಹಾಲು ಉತ್ಪಾದಕರನ್ನು ಉತ್ತೇಜಿಸಲು ಉತ್ತಮ ಹಾಲು ಖರೀದಿ ದರ ನೀಡುವುದು ಅತ್ಯವಶ್ಯವಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಾಗುತ್ತಿರುವ ಹಾಲು ಉತ್ಪಾದನಾ, ಹಾಲು ಸಂಸ್ಕರಣಾ ವೆಚ್ಚಗಳು ಮತ್ತು ರಾಜ್ಯದಲ್ಲಿ ಹೈನೋದ್ಯಮನ್ನು ಉತ್ತೇಜಿಸಿ ಪ್ರೋತ್ಸಾ ಹಿಸಲು ಹೆಚ್ಚುವರಿ ಮಾಡಿರುವ ಮಾರಾಟ ದರವನ್ನು ರೈತರಿಗೆ ವರ್ಗಾಹಿಸಲಾಗುವುದು ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಎಂಎಫ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಭೀಮಾನಾಯ್ಕ ಕೆಎಂಎಫ್ ಹಾಲಿನ ದರವನ್ನು ಕನಿಷ್ಠ 5 ರೂ. ಏರಿಕೆ ಮಾಡುವುದಾಗಿ ಸುಳಿವು ನೀಡಿದ್ದರು. ಜು.21ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿನ ದರವನ್ನು 3 ರೂಪಾಯಿಗೆ ಏರಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು.

Leave a Reply

Your email address will not be published. Required fields are marked *