Thursday, 15th May 2025

ಬಂಗಾರದ ದರದಲ್ಲಿ 380 ರೂ. ಇಳಿಕೆ

ಬೆಂಗಳೂರು: ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ಶುಕ್ರವಾರ 380 ರೂ. ಇಳಿಕೆ ಯಾಗಿದೆ.

24 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಚಿನ್ನದ ದರ 60,110 ರೂ.ಗೆ ಇಳಿಕೆಯಾಗಿದೆ. (Gold rate today) ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಚಿನ್ನದ ದರದಲ್ಲಿ 350 ರೂ. ತಗ್ಗಿದ್ದು 55,100 ರೂ.ಗೆ ಇಳಿದಿದೆ.

ಬೆಂಗಳೂರಿನಲ್ಲಿ 24 ಕ್ಯಾರಟ್‌, 10 ಗ್ರಾಮ್‌ ಬಂಗಾರದ ದರ: 

2023 ಜುಲೈ 27 : 60,490

2023 ಜುಲೈ 26 : 60,160

2023 ಜುಲೈ 25 : 60,000

2023 ಜುಲೈ 24 : 60,160

2023 ಜುಲೈ 23 : 60,160

ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ.

Leave a Reply

Your email address will not be published. Required fields are marked *