Sunday, 11th May 2025

ಎಚ್.ಡಿ.ರೇವಣ್ಣ ಮತ ಅಸಿಂಧು ಮಾಡಲು ಬಿಜೆಪಿ ಆಗ್ರಹ

ಬೆಂಗಳೂರು: ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಮತವನ್ನು ಅಸಿಂಧು ಗೊಳಿಸುವಂತೆ ಬಿಜೆಪಿ ಆಗ್ರಹಿಸಿದೆ.

ರೇವಣ್ಣ ಮತ ಚಲಾಯಿಸುವ ಸಂದರ್ಭ ತಮ್ಮ ಮತವನ್ನು ಕಾಂಗ್ರೆಸ್ ಚುನಾವಣಾ ಏಜೆಂಟ್ ಡಿ.ಕೆ.ಶಿವಕುಮಾರ್ ಅವರಿಗೆ ತೋರಿಸಿ ಮತ ಹಾಕಿದ್ದಾರೆ. ಇದು ಚುನಾವಣಾ ನಿಯಮದ ಉಲ್ಲಂಘನೆ.

 

ಆದರೆ ಆರೋಪವನ್ನು ರೇವಣ್ಣ ನಿರಾಕರಿಸಿದ್ದಾರೆ. ನಾನು ಡಿಕೆ ಶಿವಕುಮಾರ್ ಗೆ ತೋರಿಸಿ ಮತ ಹಾಕಿಲ್ಲ. ಪುಟ್ಟರಾಜು ಅವರಿಗೆ ತೋರಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಪ್ರಕರಣದ ಕಾರಣದಿಂದ ರಾಜ್ಯಸಭೆ ಫಲಿತಾಂಶ ವಿಳಂಬವಾಗುವ ಸಾಧ್ಯತೆಯಿದೆ. ಸಂಜೆ 5 ರಿಂದ ಮತಗಳ ಎಣಿಕೆ ಶುರು ವಾಗಬೇಕಿತ್ತು. ಆದರೆ ರೇವಣ್ಣ ವಿರುದ್ಧ ಬಿಜೆಪಿ ದೂರು ಕೊಟ್ಟಿದ್ದು, ಈ‌ ದೂರು ಪರಿಶೀಲಿಸಿ ಇತ್ಯರ್ಥ ಪಡಿಸಿದ ಮೇಲೆ ಮತ ಎಣಿಕೆ ಆರಂಭವಾಗಬೇಕಿದೆ. ಹೀಗಾಗಿ ಫಲಿತಾಂಶ ರಾತ್ರಿ 10 ರ ಸುಮಾರಿಗೆ ಪ್ರಕಟವಾಗುವ ಸಾಧ್ಯತೆಯಿದೆ.