Sunday, 11th May 2025

ಅಕ್ಟೋಬರ್​ 8 ರಿಂದ ಬಿಗ್​ಬಾಸ್ ಸೀಸನ್ 10 ಆರಂಭ

ಬೆಂಗಳೂರು: ಅಕ್ಟೋಬರ್​ 8 ರಿಂದ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್​ಬಾಸ್ ಸೀಸನ್ 10 ಆರಂಭವಾಗಲಿದೆ. ಎಂದಿನಂತೆ ಕಿಚ್ಚ ಸುದೀಪ್​ ​ಹೋಸ್ಟ್ ಮಾಡಲಿದ್ದಾರೆ.

ಸೀಸನ್ 10 ಹಲವು ವಿಶೇಷತೆಗಳಿಂದ ಕೂಡಿದೆ. ಈ ಬಾರಿ ಹೊಸದಾಗಿ ಬಿಗ್ ಬಾಸ್​ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಹೊಸ ಮನೆಯಲ್ಲಿ-ಹೊಸ ಆಟಕ್ಕೆ ಸಿದ್ಧತೆ ಮಾಡಿಕೊಳ್ಳಲಿದೆ. 4 ತಿಂಗಳಲ್ಲಿ ಬಿಗ್ ಬಾಸ್ ಮನೆ ಯನ್ನು ನಿರ್ಮಾಣ ಮಾಡಲಾಗಿದೆ. ಭಾರತದ ಬಿಗ್​ ಬಾಸ್​ನಲ್ಲಿ ಅತಿ ದೊಡ್ಡ ಮನೆ ಕನ್ನಡದ್ದೆ!

ಭಾರತದ ಎಲ್ಲಾ ಭಾಷೆಗಳಲ್ಲಿ ನಡೆಯುವ ಬಿಗ್ ಬಾಸ್​ ಶೋನಲ್ಲಿ ಕನ್ನಡದ ಮನೆಯೇ ಅತಿ ದೊಡ್ಡ ಮನೆಯಾ ಗಿದೆ. ಈ ಬೃಹತ್ ಮನೆಯಲ್ಲಿ 4 ತಿಂಗಳಲ್ಲಿ ನಿರ್ಮಾಣ ಮಾಡಲಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಚಾರ್ಲಿ ಸಿನಿಮಾ ಬಂದು ಒಂದು ವರ್ಷ ಆಗಿದೆ. ಆದರೂ ದೊಡ್ಡವರು ಮತ್ತು ಮಕ್ಕಳೆಲ್ಲಾಈ ಚಿತ್ರವನ್ನ ಈಗಲೂ ನೆನಪಿಸಿ ಕೊಳ್ಳುತ್ತಾರೆ. ಚಿತ್ರದ ಪ್ರತಿ ಸೀನ್ ಅದ್ಬುತವಾಗಿದೆ. ಚಾರ್ಲಿ ಆಟ, ಧರ್ಮನ ಜೊತೆಗಿನ ನಂಟು ನೋಡಿದ ಪ್ರೇಕ್ಷಕರಿಗೆ ಚಾರ್ಲಿ ಸಖತ್ ಇಷ್ಟವಾಗಿದ್ದು, ಈ ಮುದ್ದಾದ ಚಾರ್ಲಿ ಇದೀಗ ಬಿಗ್​ ಬಾಸ್​ ಮನೆಯಲ್ಲಿ ಆಟವಾಡಲು ಬರುತ್ತಿದೆ.

ಬೆಸ್ಟ್ ರೇಟೆಡ್ ಚಲನ ಚಿತ್ರ – 777 ಚಾರ್ಲಿ ಸಿನಿಮಾದ ಚಾರ್ಲಿ ಬಿಗ್ ಬಾಸ್ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿದ್ದಾರೆ. ! ಅಭಿನಂದನೆಗಳು ಚಾರ್ಲಿ ಎಂದು ಕಲರ್ಸ್​ ಕನ್ನಡ ಇನ್ಸ್ಟಾದಲ್ಲಿ ಘೋಷಿಸಲಾಗಿದೆ.

ಅಕ್ಟೋಬರ್ 8 ರಿಂದ 9.30ಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಆರಂಭವಾಗಲಿದೆ. ಬಿಗ್ ಬಾಸ್ ಕನ್ನಡ ಶೋಗ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 8ಕ್ಕೆ ಸಂಜೆ 6 ಗಂಟೆಗೆ ಪ್ರಸಾರ ಆಗಲಿದೆ.

Leave a Reply

Your email address will not be published. Required fields are marked *