Thursday, 15th May 2025

ಚಾಮರಾಜಪೇಟೆ ಬಂದ್ ಗೆ ಬೆಂಬಲ ವ್ಯಕ್ತ

CHAMARAJAPET playground

ಬೆಂಗಳೂರು: ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಕರೆ ನೀಡಿರುವ ಸ್ವಯಂ ಪ್ರೇರಿತ ಬಂದ್ ಗೆ ಬಹುತೇಕ ಬೆಂಬಲ ವ್ಯಕ್ತವಾಗಿದೆ.

ಬಂದ್ ಗೆ ಬೆಂಬಲ ನೀಡಿ ಅಂಗಡಿಗಳು, ಹೋಟೆಲ್, ಗಾರ್ಮೆಂಟ್ಸ್ ಸೋಮವಾರವೇ ಭಿತ್ತಿ ಪತ್ರಗಳನ್ನು ಅಂಟಿಸಿದ್ದರು. ಅದರಂತೆ ಮಂಗಳ ವಾರ ಬಾಗಿಲು ತೆರೆದಿರಲಿಲ್ಲ.

ಹಾಲು, ಔಷಧ, ತರಕಾರಿ ಮಾರಾಟ ಎಂದಿನಂತೆ ಇತ್ತು. ಉಳಿದಂತೆ ಹೋಟೆಲ್, ವಾಣಿಜ್ಯ ಮಳಿಗೆಗಳು, ಖಾಸಗಿ ಕಂಪನಿಗಳು, ಗಾರ್ಮೆಂಟ್ಸ್, ಕೆಲವು ಖಾಸಗಿ ಶಾಲೆಗಳು ಬಂದ್ ಆಗಿವೆ.

ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆಯ ಕೆಲವು ಯುವಕರು ಘೋಷಣೆ ಕೂಗಿದಾಗ, ಪೊಲೀಸರು ಘೋಷಣೆ ಕೂಗದಂತೆ ತಾಕೀತು ಮಾಡಿದರು. ಈದ್ಗಾ ಮೈದಾ ನಕ್ಕೆ ಯಾರೂ ಪ್ರವೇಶಿಸದಂತೆ ಪೊಲೀಸರನ್ನು ನೇಮಿಸಲಾಗಿದೆ.

‘ಈದ್ಗಾ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್‌ ಅವರ ಹೆಸರಿಡಬೇಕು. ಮೈದಾನ ಬಿಬಿಎಂಪಿ ಸ್ವತ್ತಾಗಿ ಉಳಿಯಬೇಕು. ಎಲ್ಲ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅವಕಾಶ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ’ ಎಂದು ವೇದಿಕೆ ಅಧ್ಯಕ್ಷ ರಾಮೇಗೌಡ ತಿಳಿಸಿದರು.