Saturday, 10th May 2025

ಅಪಘಾತದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಚಿಕ್ಕಪ್ಪ ಸಾವು

ಧಾರವಾಡ: ಧಾರವಾಡದ ಎಸ್ಪಿ ಕಚೇರಿ ಎದುರು ಬುಧವಾರ ತಡರಾತ್ರಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಶಾಸಕ ಅರವಿಂದ್ ಬೆಲ್ಲದ್ ಚಿಕ್ಕಪ್ಪ ಮೃತಪಟ್ಟಿದ್ದಾರೆ.

ಶಾಸಕ ಅರವಿಂದ್ ಬೆಲ್ಲದ್ ಚಿಕ್ಕಪ್ಪ ಶಿವಣ್ಣ ಬೆಲ್ಲದ್ (82) ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.

ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಗಾಯಗೊಂಡ ಶಿವಣ್ಣ ಬೆಲ್ಲದ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಅಂತ್ಯಕ್ರಿಯೆ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದೆ.

ಧಾರವಾಡದ ಎಸ್‌ಪಿ ಕಚೇರಿ ಬಳಿ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಶಿವಣ್ಣ ಬೆಲ್ಲದ್‌ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಶಿವಣ್ಣ ಬೆಲ್ಲದ್‌ರನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರಗೆ ದಾಖಲು ಮಾಡಿದ್ದರು.