ಬೆಳಗಾವಿ: ನಗರದ ಸಿವಿಲ್ ಆಸ್ಪತ್ರೆಯಲ್ಲಿ ಇಪ್ಪತ್ತು ವರ್ಷದ ಮಹಿಳೆ ವೈಶಾಲಿ ಕೊಟಬಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದಾರೆ.
ಸಿವಿಲ್ ಆಸ್ಪತ್ರೆ ಸಿಬ್ಬಂದಿ ಹಾಗೂ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವನ್ನು ಮಹಿಳಾ ಮೋರ್ಚಾ ಬಿಜೆಪಿ ಕರ್ನಾಟಕ ದಿಂದ ನಾವು ಖಂಡಿಸುತ್ತೇವೆ. ಕೂಡಲೇ ಆರೋಗ್ಯ ಸಚಿವರು ಕ್ರಮ ಕೈಗೊಳ್ಳಬೇಕು. ಈ ಮಹಿಳೆ ಯರು ಸರಿಯಾದ ಆರೈಕೆ ಮತ್ತು ಆರೋಗ್ಯ ರಕ್ಷಣೆಯಿಲ್ಲದೆ ಸಾಯುತ್ತಿರುವುದು ನಿಜವಾದ ಸಮಸ್ಯೆಯಾಗಿದೆ ಮತ್ತು ಅದನ್ನು ಪರಿಹರಿಸಬೇಕಾಗಿದೆ.
ಇತ್ತೀಚೆಗಷ್ಟೇ ನಾವು ಚಳಿಗಾಲದ ಅಧಿವೇಶನದಲ್ಲಿ ಇದೇ ವಿಷಯದ ಬಗ್ಗೆ ಪ್ರತಿಭಟನೆ ನಡೆಸಿದ್ದರೂ ವ್ಯರ್ಥವಾಯಿತು.