Monday, 12th May 2025

Belagavi News: ಹಾರೂಗೇರಿಯ ಜನತಾ ಕಾಲೋನಿಯಲ್ಲಿ ಸಮುದಾಯ ಭವನ ಉದ್ಘಾಟಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ

Belagavi News

ಹಾರೂಗೇರಿ: ಪಟ್ಟಣದ ಜನತಾ ಕಾಲೋನಿಯಲ್ಲಿ ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ 2022-23 ಸಾಲಿನ ವಿಶೇಷ ಘಟಕ ಯೋಜನೆ ಎಸ್‌ಸಿಪಿ ಯೋಜನೆ ಅಡಿಯಲ್ಲಿ 65 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನವನ್ನು ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ (Belagavi News) ಉದ್ಘಾಟಿಸಿದರು.

ಈ ಸುದ್ದಿಯನ್ನೂ ಓದಿ | Job Guide: ಪವರ್‌ ಗ್ರಿಡ್‌ ಕಾರ್ಪೋರೇಷನ್‌ನಲ್ಲಿದೆ 802 ಹುದ್ದೆ; ಡಿಪ್ಲೊಮಾ ವಿದ್ಯಾರ್ಹತೆಯವರು ಅರ್ಜಿ ಸಲ್ಲಿಸಿ

ಸಮುದಾಯ ಭವನವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಮಾತನಾಡಿದರು.

ಈ ಸುದ್ದಿಯನ್ನೂ ಓದಿ | Karnataka Rain: ನಾಳೆ ಬೆಂಗಳೂರು, ಕೋಲಾರ, ಹಾಸನ ಸೇರಿ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ವಸಂತ ಲಾಳಿ, ಡಿ.ಎಸ್. ಕಟ್ಟಿಮನಿ, ಪುರಸಭೆಯ ಮುಖ್ಯಾಧಿಕಾರಿ ಅಭಿಷೇಕ ಪಾಂಡೆ, ಪುರಸಭೆ ಸದಸ್ಯರಾದ ಆನಂದಗೌಡ ಪಾಟೀಲ, ಬಸವರಾಜ ಚೌಗಲಾ, ಮಾಳು ಹಾಡಕಾರ, ಮಲ್ಲಪ್ಪ ಐನಾಪುರ, ರಾಜು ಅರಳಿಕಟ್ಟಿ, ಪ್ರದೀಪ ಹಾಲ್ಗುಣಿ ಹಾಗೂ ಸ್ಥಳೀಯ ಮುಖಂಡ ದೇವಪ್ಪ ಕಟ್ಟಿ, ಭೀಮಣ್ಣ ಚೌಗಲಾ, ಬಾಳು ಹಾಡಕಾರ, ಶಶಿಧರ ಸಿಂಗೆ ಹಾಗೂ ಇತರರು ಉಪಸ್ಥಿತರಿದ್ದರು.