Sunday, 11th May 2025

ತಮ್ಕ ಹಕ್ಕು ಚಲಾಯಿಸಿದ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಕುಟುಂಬ ಸಮೇತರಾಗಿ ನಗರದ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲ ಯದ ಮತಗಟ್ಟೆ 61ರಲ್ಲಿ ಸಾಮಾನ್ಯರಂತೆ ಸರದಿಯಲ್ಲಿ ನಿಂತು ತಮ್ಕ ಹಕ್ಕು ಚಲಾಯಿಸಿದರು.

ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಅವರು ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾ ರಕ್ಕೆ ಬರಲಿದೆ. ಕನಿಷ್ಠ 130 ಸ್ಥಾನ ಗಳಿಸ ಲಿದೆ. ವಿಜಯಪುರ ಜಿಲ್ಲೆಯಲ್ಲಿ 8 ಮತಕ್ಷೇತ್ರ ದಲ್ಲಿ ಎಷ್ಟು ಸ್ಥಾನ ಬರುತ್ತದೆ ಎಂದು ಭವಿಷ್ಯ ನುಡಿಯಲು ಆಗುವುದಿಲ್ಲ. ಆದರೆ, ಸರ್ಕಾರ ಬಿಜೆಪಿಯೇ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದಲ್ಲಿ ಮತ ಚಲಾಯಿಸಲು ಗೋವಾಕ್ಕೆ ದುಡಿಯಲು ಹೋಗಿದ್ದ ಕಾರ್ಮಿಕರು ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಬೆಳಗ್ಗೆ ಬಂದಿಳಿದರು. ನಂತರ ತಮ್ಮ ತಮ್ಮ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು.

ಸಿಂದಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮತ ಚಲಾವಣೆ ಮಾಡಿದರು. ಕ್ಷೇತ್ರದ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದ ಮತಗಟ್ಟೆ 9 ರಲ್ಲಿ ಪತ್ನಿ ಲಲಿತಾಬಾಯಿ, ಪುತ್ರ ಡಾ ಮಂಜುನಾಥ ಹಾಗೂ ಬೆಂಬಗಲಿಗರೊಂದಿಗೆ ಆಗಮಿಸಿ ಹಕ್ಕು ಚಲಾವಣೆ ಮಾಡಿದರು.