Saturday, 10th May 2025

Baby Shower: ಮಹಿಳಾ ಪೇದೆಗೆ ಠಾಣೆಯಲ್ಲೇ ಸೀಮಂತ; ಉಡಿ ತುಂಬಿ ಶುಭ ಹಾರೈಕೆ

Baby Shower

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸ್​ಟೇಬಲ್​ಗೆ ಸೀಮಂತ ಕಾರ್ಯಕ್ರಮ (Baby Shower) ನೆರವೇರಿಸಲಾಗಿದೆ. ಸಹೋದ್ಯೋಗಿ ಕಾನ್ಸ್​ಟೇಬಲ್ ಸುನೀತಾಗೆ ಅರಿಶಿನ, ಕುಂಕುಮ ಹಚ್ಚಿ, ಹಸಿರು ಬಳೆ ತೊಡಿಸಿದ ಠಾಣೆಯ ಮಹಿಳಾ ಸಿಬ್ಬಂದಿ, ರೇಷ್ಮೆ ಸೀರೆ, ಅಕ್ಕಿ, ಫಲ ತಾಂಬೂಲ ಸಹಿತ ಉಡಿ ತುಂಬುವ ಶಾಸ್ತ್ರ ಮಾಡಿದ್ದಾರೆ. ಇನ್ಸ್‌ಪೆಕ್ಟರ್‌ ಅಜಯ್ ಕುಮಾರ್ ಸೇರಿ ಠಾಣೆಯ ಸಿಬ್ಬಂದಿ ಅಕ್ಷತೆ ಹಾಕಿ ಮಹಿಳಾ ಪೇದೆಗೆ ಶುಭ ಹಾರೈಸಿದ್ದಾರೆ.

ಈ ಸುದ್ದಿಯನ್ನೂ ಓದಿ | Renewable Energy: ದೇಶದ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ