Saturday, 10th May 2025

ಅಂತರಂಗದ ಅವಲೋಕನ ಗ್ರಂಥ ಲೋಕಾರ್ಪಣೆ

ಪಾವಗಡ : ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಆರ್. ಹುಲಿ ನಾಯ್ಕರ್ ಅವರ 75 ವರ್ಷದ ಅಮೃತ ಮಹೋತ್ಸವ ಅಗವಾಗಿ ಆತ್ಮಕಥನ ಅಂತರಂಗದ ಅವಲೋಕನ ಗ್ರಂಥ ಲೋಕಾರ್ಪಣೆ ಮಾಡಲಾಗುವುದು ಎಂದು ಮುಖಂಡ ಟಿ.ಎನ್.ಮಧುಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಹಿಂದುಳಿದ ಕೃಷಿಕ ಸಮಾಜ ಅಂದರೆ ಹಾಲುಮತ ಸಮುದಾಯದಿಂದ ಬಂದಿರುವ  ಡಾ. ಎಮ್ ಆರ್ ಹುಲಿ ನಾಯ್ಕರ್ ತಮ್ಮ ಸಾಧನೆಗಳಿಂದ ರಾಜ್ಯದಲ್ಲಿ ಗುರುತಿಸಿ ಕೊಂಡಿದ್ದಾರೆ ಸುಮಾರು 77 ವಸಂತಗಳನ್ನು ಪೂರೈಸಿರುವ  ಹಿನ್ನೆಲೆಯಲ್ಲಿ  ನವೆಂಬರ್ 25ರಂದು 75 ವರ್ಷ ತುಂಬಿದ ಸಂದರ್ಭದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಒಂದು ಕಾರ್ಯಕ್ರಮಕ್ಕೆ ತಾಲೂಕಿನ ಜನರು ಭಾಗವಹಿಸಿ  ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂಬುದಾಗಿ ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಧನಿಯಾ ಕುಮಾರ್. ಸುರೇಶ್. ಗಿರೀಶ್. ಸವಿತ ಸಮಾಜ ಮಂಜೇಶ್. ಹಿರಿಯ ವಕೀಲ ನಾಗೇಂದ್ರಪ್ಪ.ಮೈಲಪ್ಪ. ಶೇಷಗಿರಿ. ಮಾಜಿ ಪುರಸಭೆ ಸದಸ್ಯ ಮಹೇಶ್. ಮಾಜಿ ಪುರಸಭೆ ಸದಸ್ಯ ನಂಜುಂಡಸ್ವಾಮಿ ಇದ್ದರು.

Leave a Reply

Your email address will not be published. Required fields are marked *