Saturday, 10th May 2025

Arrest after 27 years: 27 ವರ್ಷದ ನಂತರ ಕೊಲೆ ಆರೋಪಿ ಬಂಧನ 

ತುಮಕೂರು: ಪತ್ನಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದು ತಲೆ ಮರೆಸಿಕೊಂಡಿದ್ದ ಆರೋಪಿ (Accused) ಪತಿಯನ್ನು ನೊಣವಿನಕೆರೆ ಪೊಲೀಸರು 27 ವರ್ಷದ ನಂತರ ಪತ್ತೆ ಮಾಡಿ ಬಂಧಿಸಿದ್ದಾರೆ.

ಪಟೂರು ತಾಲೂಕು ಕುಡುವನಘಟ್ಟದ ನಿಂಗಪ್ಪ(62) ಆತನ ಪತ್ನಿ ಗೌರಮ್ಮನನ್ನು 1997 ಮೇ.4ರಂದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ತಲೆಮರೆಸಿಕೊಂಡಿದ್ದನು.

ತನ್ನ 35ನೇ ವರ್ಷದಲ್ಲಿ ಊರು ಬಿಟ್ಟು ಹೋಗಿದ್ದ ನಿಂಗಪ್ಪ ಈಗ 62ನೇ ವಯಸ್ಸಿನಲ್ಲಿ ಊರಿಗೆ ವಾಪಸಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕುಡುವನಘಟ್ಟದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದಾರೆ.

ಇದನ್ನೂ ಓದಿ: Crime News: ನಾಲ್ಕನೇ ಬಾರಿಯೂ ಹೆಣ್ಣು ಮಗುವೆಂದು ನೆಲಕ್ಕೆ ಬಡಿದು ಕೊಂದ ಪಾಪಿ ತಂದೆ