ಬೆಂಗಳೂರು; ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್(Dr B R Ambedkar) ವಿರುದ್ಧ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಮಾಡಿದ್ದ ಟೀಕೆ ಕುರಿತು ಮಾರುತಿ ನಗರದ ದಲಿತ ಸಂಘಟನೆ ಮುಖಂಡ & ಸಮಾಜ ಸೇವಕ ಎಂ.ಎನ್. ಗಂಗಾಧರಯ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರನ್ನು ದೆಹಲಿಯ ಪಾರ್ಲಿಂಟ್ ಸ್ಟ್ರೀಯ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಅಮಿತ್ ಷಾ ಅವರು ಡಿ. 17 ರಂದು ರಾಜ್ಯ ಸಭೆಯಲ್ಲಿ ” ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಪ್ಯಾಷನ್ ಆಗಿದೆ. ಇಷ್ಟೊಂದು ಬಾರಿ ದೇವರ ನಾಮ ಜಪ ಮಾಡಿದ್ದರೆ ಏಳೇಳು ಜನ್ಮಕ್ಕೂ ಸ್ವರ್ಗ ದೊರೆಯುತ್ತಿತ್ತು” ಎಂದು ಮಾಡಿ ರುವ ಟೀಕೆ ನಮ್ಮ ಮನಸ್ಸಿಗೆ ನೋವುಂಟು ಮಾಡಿದ್ದು, ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ ಮತ್ತು ಅಗೌರವ ತೋರಿದ್ದಾರೆ. ಅವರ ಮೇಲೆ ಪ್ರಿವೇನ್ಷನ್ ಅಪ್ ಅಟ್ರಾಸಿಟಿ ಅಕ್ಟ್ 1989 ರಡಿಯಲ್ಲಿ ಮೊಕದ್ದಮೆ ದಾಖಲಿಸಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ಸಲ್ಲಿಸಿದ್ದರು.
ಸದರಿ ದೂರು ಅರ್ಜಿಯನ್ನು ಸರಹದ್ದು ಆಧಾರದ ಮೇಲೆ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆದ್ದರಿಂದ ನೀವೂ ನಿಮ್ಮ ಬಳಿಯಿರುವ ಸಾಕ್ಷಾಧಾರಗಳೊಂದಿಗೆ ಸಂಬಂಧಪಟ್ಟ ಠಾಣಾಧಿಕಾರಿಗಳನ್ನು ಭೇಟಿ ಮಾಡುವಂತೆ ಸೂಚಿಸಿ ಕೋರಮಂಗಲ ಠಾಣೆ ಪೊಲೀಸರು ಹಿಂಬರಹ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಂ.ಎನ್. ಗಂಗಾಧರಯ್ಯ, ತಾವು ಶೀಘ್ರದಲ್ಲೇ ದೆಹಲಿಗೆ ತೆರಳಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸರನ್ನು ಭೇಟಿ ಮಾಡಿ ದೂರಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಒದಗಿಸಿ ತಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದರು.