ಚಿಂತಾಮಣಿ : ಸರಕಾರಿ ಮಾದರಿ ಶಾಲಾವರಣದಲ್ಲಿ ಅನುಮತಿ ಪಡೆದೇ ಸ್ಥಾಪಿಸಿರುವ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಶಿಕ್ಷಣ ಇಲಾಖೆ,ತಾಲೂಕು ಆಡಳಿತ ಕೂಡಿಯೇ ಅಪಮಾನ ಮಾಡಿದ್ದಾರೆಂದು ಆರೋಪಿಸಿ ನಡೆಯು ತ್ತಿರುವ ಪ್ರತಿಭಟನೆಯ ೮ ದಿನವಾದ ಸೋಮವಾರ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಪಂಜಿನ ಮೆರವಣಿಗೆ ನಡೆಸುವ ಮೂಲಕ ಪ್ರತಿಮೆಯನ್ನು ಸಾರ್ವಜನಿಕ ಬಳಕೆಗೆ ಬಿಡಬೇಕು ಎಂದು ಎಚ್ಚರಿಕೆ ನೀಡಿದರು.
ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಸ್ಥಾಪಿಸರುವ ಬಾಬಾಸಾಹೇಬ್ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಶಿಕ್ಷಣ ಇಲಾಖೆ,ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಕೂಡಿ ಕೊಳಕು ಬಟ್ಟೆ ಯನ್ನು ಸುತ್ತಿ ಬೇಕೆಂತಲೇ ಅಪಮಾನ ಮಾಡಿರುವುದನ್ನು ಖಂಡಿಸಿ ವಿವಿಧ ದಲಿತಪರ ಸಂಘಟನೆಗಳು ೮ ದಿನ ಗಳಿಂದ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
೮ನೇ ದಿನಕ್ಕೆ ಧರಭಿ ಕಾಲಿಟ್ಟಿದ್ದು ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಆಯೋಜಿಸಿದ್ದ ಬೃಹತ್ ಪಂಜಿನ ಮೆರವಣಿಗೆಯನ್ನು ತಾಲ್ಲೂಕ್ ಕಚೇರಿಯಿಂದ ಆರಂಭಿಸಿ ನಗರದ ವಿವಿಧ ವೃತ್ತಗಳ ಮೂಲಕ ಸಾಗಿ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ಧರಣಿ ನಿರತ ಸ್ಥಳಕ್ಕೆ ವಾಪಸ್ ಬಂದರು.
ಈ ವೇಳೆ ಮಾತನಾಡಿದ ಜನಾರ್ಧನ್‌ಬಾಬು,ವಿಜಯ ನರಸಿಂಹ,ಮರಸೂರು ಕೃಷ್ಣಪ್ಪ,ಅಂಬೇಡ್ಕರ್ ಅವರ ವಿಗ್ರಹಕ್ಕೆ ಸುತ್ತಿರುವ ಕೊಳಕು ಬಟ್ಟೆಯನ್ನು ಈ ಕೂಡಲೇ ತಾಲ್ಲೂಕ್ ಆಡಳಿತ ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆ ತೆರವುಗೊಳಿಸಿ ಗೌರವ ಸಲ್ಲಿಸಬೇಕು.ಇಲ್ಲದಿದ್ದರೆ ರಾಜ್ಯ ಮಟ್ಟದಲ್ಲಿ ಎಲ್ಲಾ ದಲಿತಪರ ಸಂಘಟನೆಗಳು ಉಗ್ರ ಹೋರಾಟಗಳನ್ನು ನಡೆಸಲು ರಸ್ತೆಗೆ ಇಳಿಯಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು.
ಮುಂದುವರೆದು ತಾಲ್ಲೂಕ್ ಆಡಳಿತ ಜಿಲ್ಲಾ ಆಡಳಿತ ಹಾಗೂ ಸರ್ಕಾರ ಇತ್ತ ಕಡೆ ಗಮನಹರಿಸಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿಬೇಕು.ಆಮೂಲಕ ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನು ಗೌರವಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.