Sunday, 11th May 2025

ಮೇಘಸ್ಫೋಟ: ಶಿವಮೊಗ್ಗದ ಮಹಿಳೆಯರ ಅಮರನಾಥ ಯಾತ್ರೆ ರದ್ದು

ಶಿವಮೊಗ್ಗ: ಅಮರನಾಥ ದೇಗುಲದ ಬಳಿ ಮೇಘಸ್ಫೋಟಗೊಂಡಿದ್ದು 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಬೆನ್ನಲ್ಲೇ  ಶಿವಮೊಗ್ಗದಿಂದ ಮಹಿಳೆಯರ ತಂಡ ಯಾತ್ರೆಗೆ ತೆರಳಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಮೇಘಸ್ಫೋಟದ ಹಿನ್ನೆಲೆಯಲ್ಲಿ ಯಾತ್ರೆ ರದ್ದುಗೊಂಡಿದ್ದು ಸೋಮವಾರ ಶಿವಮೊಗ್ಗಕ್ಕೆ ವಾಪಸಾಗಲಿದ್ದಾರೆ.

ಕಳೆದ ಜು.4ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ್ದ ಮಹಿಳೆಯರು ಬೆಂಗಳೂರಿ ನಿಂದ ವೈಷ್ಣೋದೇವಿ ದರ್ಶನ ಪಡೆದು, ಬಳಿಕ ಅಮರನಾಥ ದರ್ಶನಕ್ಕೆ ಹೋಗಿದ್ದಾರೆ. ಮಾಜಿ ಮೇಯರ್ ಸುರೇಖಾ ಮುರಳೀಧರ್ ಸೇರಿದಂತೆ 16 ಮಂದಿ ಮಹಿಳೆಯರು ಯಾತ್ರೆಗೆ ಹೋಗಿದ್ದಾರೆ. ಪ್ರಸ್ತುತ ಅಮರನಾಥ ಸಮೀಪದ ಪಹಲ್ಗಾಮ್ ಬೇಸ್ ಕ್ಯಾಂಪ್​ನಲ್ಲಿ ಇದ್ದಾರೆ.

ಪೂರ್ವ ನಿಗದಿಯಂತೆ ಅಮರನಾಥ ದರ್ಶನಕ್ಕೆ ಈ ತಂಡ ಹೋಗಬೇಕಿತ್ತು. ಜು.5ರಂದು ಪ್ರತಿಕೂಲ ಹವಾಮಾನ ಹಿನ್ನೆಲೆ ಅಮರನಾಥ ದರ್ಶನ ಮುಂದೂಡಲ್ಪಟ್ಟಿತ್ತು. ಇದೀಗ ಅಮರನಾಥ ಯಾತ್ರೆಯನ್ನೇ ರದ್ದುಗೊಳಿಸಿ, ವಾಪಸ್ ಹೊರಟಿದ್ದಾರೆ.