Wednesday, 14th May 2025

ಮಾನವ ಶ್ರೇಷ್ಠತೆಗಾಗಿ ಶ್ರಮಿಸಿದ ವಿವಿಧ ಕ್ಷೇತ್ರಗಳ ೭ ಮಂದಿ ಸಾಧಕಿಯರಿಗೆ ಸತ್ಯಸಾಯಿ ಪ್ರಶಸ್ತಿ ಪ್ರದಾನ

ಚಿಕ್ಕಬಳ್ಳಾಪುರ : ಸತ್ಯಸಾಯಿ ಗ್ರಾಮದಲ್ಲಿ ಕಳೆದ ೭ ವರ್ಷಗಳಿಂದ ಮಾನವ ಶ್ರೇಷ್ಟತೆಗಾಗಿ ಶ್ರಮಿಸುತ್ತಿರುವ ಎಲೆಮರೆ ಕಾಯಿ ತರದ ಸಾಧಕರನ್ನು ಗುರುತಿಸಿ ನೀಡಲಾಗುತ್ತಿರುವ ಶ್ರೀ ಸತ್ಯ ಸಾಯಿ ಯುನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಶಿಕ್ಷಣ, ಆರೋಗ್ಯ, ಪರಿಸರ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಧಾರ್ಮಿಕ ಏಕತೆ, ಸಂಗೀತ ಮತ್ತು ಲಲಿತಕಲೆ ಹಾಗೂ ಯೋಗ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಮಾನವ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಗುರುತಿಸಿ ಗೌರವಿ ಸುವ ಉದ್ದೇಶದಿಂದ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರು ಏಳು ವರ್ಷದ ಹಿಂದೆ ಆರಂಭಿಸಿದ ‘ಮಾನವ ಶ್ರೇಷ್ಠತೆಗಾಗಿ ಶ್ರೀ ಸತ್ಯಸಾಯಿ ಪ್ರಶಸ್ತಿ’ ಯ ಆರನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರ ಸಮ್ಮುಖದಲ್ಲಿ ಏಳು ಮಂದಿ ಮಹಿಳೆಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಬಗ್ಗೆ ಮಾತನಾಡಿರುವ ಸದ್ಗುರು ಮಧುಸೂಧನ್ ಸಾಯಿ ಈ ಪ್ರಶಸ್ತಿಯ ಪ್ರಮುಖ ಉದ್ದೇಶವೇ ಮಹಿಳಾ ಉತ್ಕೃಷ್ಟತೆಯ ಶಕ್ತಿಯನ್ನು ಜಗತ್ತಿಗೆ ಸಾರುವ ಮೂಲಕ ಸಂಭ್ರಮಿಸುವುದಾಗಿದೆ. ಹೀಗಾಗಿ ತೆಲಂಗಾಣದ ರಾಜ್ಯಪಾಲರು ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಡಾ. ತಮಿಳಿಸಾಯಿ ಸೌಂದರರಾಜನ್ ಮತ್ತು ಮಾನವತಾವಾದಿ ಮತ್ತು ಎಂಪವರ್‌ನ ಅಧ್ಯಕ್ಷೆ ಡಾ. ನಿರಜಾ ಬಿರ್ಲಾ ರಂಥಹ ಆದರ್ಶಪ್ರಾಯ ಮಹಿಳೆಯರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದೆ.

ಶ್ರೀ ಸತ್ಯಸಾಯಿ ಯುನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ ವತಿಯಿಂದ ಮಾನವ ಶ್ರೇಷ್ಠತೆಗಾಗಿ ವಾರ್ಷಿಕ ಪ್ರಶಸ್ತಿಯನ್ನು ಸಂಯೋಜಿಸುತ್ತದೆ. ಈ ವಿಶ್ವವಿದ್ಯಾನಿಲಯವು ಶ್ರೀ ಸತ್ಯಸಾಯಿ ಬಾಬಾ ಅವರ ತತ್ವಗಳ ಆಧಾರದ ಮೇಲೆ ನಿರ್ಗತಿಕ ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಾ ಬಂದಿದೆ ಎಂದರು.

ಪ್ರಶಸ್ತಿ ಪಡೆದ ೭ ಮಹಿಳೆಯರು ದೇಶಕ್ಕಾಗಿ ಅದ್ಭುತಗಳನ್ನು ಮಾಡಿದ ಭಾರತದ ಅದ್ಭುತ ಮಹಿಳೆಯರು. ವಿಶ್ವವಿದ್ಯಾಲಯವಾಗಿ ಅವರು ಮಾಡಿದ ಎಲ್ಲಾ ತ್ಯಾಗಗಳು ಮತ್ತು ಪ್ರಯತ್ನಗಳನ್ನು ಗುರುತಿಸುವುದು ನಮ್ಮ ವಿಶೇಷ ಗೌರವ.

ಇಂದಿನ ಕಾರ್ಯಕ್ರಮ ದಲ್ಲಿ ಡಾ. ತಮಿಳಿಸಾಯಿ ಸೌಂದರರಾಜನ್ ಅವರು ಆಗಮಿಸಿ ರುವುದು ನಮಗೆ ಗೌರವ ತಂದಿದೆ. ಆದಿತ್ಯ ಬಿರ್ಲಾ ಗ್ರೂಪ್‌ನ ಪ್ರೋತ್ಸಾಹದೊಂದಿಗೆ ಹಿಂದುಳಿದ ಹಿನ್ನೆಲೆಯ ಮಹಿಳೆಯರನ್ನು ಗೌರವಿಸುತ್ತದೆ ಆದಿತ್ಯ ಬಿರ್ಲಾ ಸಮೂಹ ವನ್ನು ಪ್ರತಿನಿಧಿಸಿ, ಈ ಪ್ರಶಸ್ತಿಯನ್ನು ಪೋಷಿಸಿದ್ದಕ್ಕಾಗಿ ಶ್ರೀಮತಿ ನೀರ್ಜಾ ಬಿರ್ಲಾ ಅವರ ಉಪಸ್ಥಿತಿಯನ್ನು ಕೂಡಾ ನಾವು ಗೌರವಿಸುತ್ತೇವೆ” ಎಂದು ಹೇಳಿದರು.

ಡಾ. ತಮಿಳಿಸಾಯಿ ಸೌಂದರರಾಜನ್ ಮಾತನಾಡಿ, “ಮಹಿಳೆಯರನ್ನು ಪ್ರೇರೇಪಿಸುವ ಮತ್ತು ಬೆಂಬಲಿಸಿದ್ದಕ್ಕಾಗಿ ನಾನು ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸದ್ಗುರುಗಳು ಪ್ರತಿಪಾದಿಸುತ್ತಾ ಬಂದಿರುವ ಉಚಿತ ವೈದ್ಯಕೀಯ ಕಾಲೇಜು ಪರಿಕಲ್ಪನೆ ಇಡೀ ರಾಷ್ಟçದ ಕನಸು. ದೀನ ದಲಿತ ಮಕ್ಕಳಿಗಾಗಿ ಅವರ ಪೌಷ್ಠಿಕಾಂಶ ಕಾರ್ಯಕ್ರಮ,೨೭ ಶೈಕ್ಷಣಿಕ ಕ್ಯಾಂಪಸ್‌ಗಳು ರಾಷ್ಟçಕ್ಕಾಗಿ ಉತ್ತಮ ಕೊಡುಗೆ ನೀಡುತ್ತಿವೆ” ಎಂದು ಬಣ್ಣಿಸಿದರು.

ಪ್ರಶಸ್ತಿ ಪುರಸ್ಕೃತರು: ಆದಿವಾಸಿ ಮಕ್ಕಳ ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಒಡಿಶಾದ ಡಾ.ತುಳಸಿ ಮುಂಡಾ, ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸುವ ಮೂಲಕ ಸಾವಿರಾರು ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ಮಾಡಿದ ಛತ್ತೀಸ್‌ಗಢ ಗ್ರಾಮೀಣ ಪ್ರದೇಶದ ಕೌಶಿಲ್ಯ ಬಾಯಿ, ಸಾವಯವ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಉತ್ತೇಜಿಸುವಲ್ಲಿ ಗಣನೀಯ ಕೊಡುಗೆ ನೀಡಿದ ತಮಿಳುನಾಡಿನ ಗುಡ್ಡಗಾಡು ಹಳ್ಳಿಯ ಆರ್.ರಂಗಮ್ಮಳ್, ದಲಿತ ದೌರ್ಜನ್ಯದ ವಿರುದ್ಧ ನಿರಂತರ ಹೋರಾಟ ಮತ್ತು ಮಹಿಳೆಯರ ಶಿಕ್ಷಣ ಹಾಗೂ ಸಬಲೀಕರಣಕ್ಕಾಗಿ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಬಂದ ವಕೀಲೆ ಗೌರಿ ಕುಮಾರಿ, ಮಾಟ ಮಂತ್ರದ ವಿರುದ್ಧ ಧ್ವನಿ ಎತ್ತಿದ ಮತ್ತು ತಪ್ಪು ವ್ಯಾಖ್ಯಾನಗಳು ಅಥವಾ ದುರ್ಬಳಕೆ ಮೂಲಕ ಪವಿತ್ರ ಧಾರ್ಮಿಕ ಪದ್ಧತಿಗಳ ಪಾವಿತ್ರ‍್ಯತೆಯನ್ನು ದುರ್ಬಲಗೊಳಿಸದೆ ಕಾಪಾಡಿಕೊಂಡು ಬಂದ ಡಾ.ಬೀರು ಬಾಲಾ ರಾಮಾ, ಪಾಂಡವಣಿ ಜಾನಪದ ಕಲೆಗೆ ಅಪಾರ ಕೊಡುಗೆ ನೀಡಿದ ಜಾನಪದ ಕಲಾವಿದೆ ಡಾ. ಟಿಜಾನ್ ಬಾಯಿ ಮತ್ತು ಅಂಗವಿಕಲರ ಕ್ರೀಡಾ ಕ್ಷೇತ್ರದಲ್ಲಿ ತೋರಿದ  ಅಮೂಲ್ಯ ಸಾಧನೆಗಳಿಗಾಗಿ ಮತ್ತು ಹಲವಾರು ಅಂಗವಿಕಲ ಮಕ್ಕಳಿಗೆ ಸಹಾಯ ಮಾಡುವಲ್ಲಿ ಅವರು ಮಾಡಿದ ಕಾರ್ಯಗಳಿಗಾಗಿ ಡಾ. ಮಾಲತಿ ಕೆ. ಹೊಳ್ಳ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.