Sunday, 11th May 2025

ಲಾರಿ-ಕಾರು ಡಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

ಸಿಂಧನೂರು: ತಾಲೂಕಿನ ಬಾಲಯ್ಯ ಕ್ಯಾಂಪ್ ಬಳಿ ಲಾರಿ ಹಾಗೂ ಕಾರ್ ಡಿಕ್ಕಿ ಹೊಡೆದ ಪರಿಣಾಮ ದಿಂದ ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದುರ್ಘಟನೆ ಸೋಮವಾರ ಬೆಳಗಿನ ಜಾವ ಜರುಗಿದೆ.

ಕಾರಿನಲ್ಲಿ ಇದ್ದ ಆಂಧ್ರ ಮೂಲದ ಅಮರ್ ದೀಪ್ (35), ಪೂರ್ಣಿಮಾ (30) ಜತೇನ್ (12) ಹಾಗೂ ಮಾರಿ(7) ಮೃತಪಟ್ಟ ದುರ್ದೈವಿಗಳು. ಸಿಂಧನೂರು ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಹೋಗುತ್ತಿರುವ ವೇಳೆ ಲಾರಿ ಡಿಕ್ಕಿ ಹೊಡೆದಿರುವುದರಿಂದ ಈ ಘಟನೆ ಜರುಗಿದೆ, ಲಾರಿಯ ಚಾಲಕ ಪರರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.