ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಚಿಂತಾಮಣಿ : ನಗರದ ಹೊರವಲಯದ ರಾಷ್ಟೀಯ ಹೆದ್ದಾರಿ ೨೩೪ ರಸ್ತೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಸಮೀಪ ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿAದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳು ಜಖಂಗೊAಡಿರುವ ಘಟನೆ ಗುರುವಾರ ಬೆಳಗಿನ ಜಾವ ಸುಮಾರು 4 ಗಂಟೆಯ ಸಮಯದಲ್ಲಿ ನಡೆದಿದೆ.
ಕ್ಯಾಂಟರ್ ವಾಹನ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವದೇ ಸಾವು ನೋವು ಸಂಭವಿಸಿಲ್ಲ,ಅಲೂಗಡ್ಡೆ ತುಂಬಿಸಿಕೊAಡು ಅಗ್ರಾದಿಂದ ಬಂದ ಲಾರಿ ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆಯ ಬಳಿ ಅನ್‌ಲೋಡ್ ಮಾಡಲು ಬರುತ್ತಿದ್ದಾಗ,ಬೆಳಿಗಿನ ಜಾವ ಸುಮಾರು ನಾಲ್ಕು ಗಂಟೆಯ ಸಮಯದಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಸಮೀಪದ ರಸ್ತೆಯ ಬದಿಯಲ್ಲಿ ಲಾರಿ ನಿಲ್ಲಿಸಿದ ಚಾಲಕ ಶೌಚಕ್ಕೆ ಹೋಗಿದ್ದಾನೆ.
ಅದೇ ಸಮಯಕ್ಕೆ ತುಮಕೂರುನಿಂದ ಕೋಳಿ ಫೀಡ್ ತುಂಬಿಸಿಕೊAಡು ಕೋಲಾರ ಜಿಲ್ಲೆಯ ಮುಳುಬಾಗಿಲು ಕಡೆ ಹೊರಟಿದ್ದ ಕ್ಯಾಂಟರ್ ವಾಹನ ಚಾಲಕ ಸಾಧಿಕ್ ಎಂಬಾತ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಕ್ಯಾಂಟರ್ ಡಿಕ್ಕಿಯ ರಭಸಕ್ಕೆ ಲಾರಿ ರಸ್ತೆಬದಿಯಿಂದ ಪಕ್ಕದ ಗುಂಡಿಗೆ ಇಳಿದಿದೆ, ಲಾರಿಯ ಹಿಂಭಾಗದ ಬಲಭಾಗ ಸಂಫೂರ್ಣ ಜಖಂಗೊAಡಿದೆ, ಇನ್ನು ಲಾರಿಯ ಹಿಂಬದಿಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ವಾಹನ ಸಹ ಸಂಫೂರ್ಣ ಜಖಂಗೊAಡಿದ್ದು, ಚಾಲಕ ಸಾಧಿಕ್ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ,
ವಿಷಯ ತಿಳಿದ ಕೂಡಲೇ ಸಮೀಪದಲ್ಲಿಯೇ ಇರುವ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನು ಲಾರಿಯ ಅಪಘಾತದ ತಿಳಿದ ಕೂಡಲೇ ಲಾರಿಯ ಮಾಲೀಕ ರಾಜಾರೆಡ್ಡಿ ಅಪಘಾತದ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.