Sunday, 11th May 2025

ಮಾಲೂರು ಬಳಿ ಅಪಘಾತ: 13 ಮಂದಿ ಕಾರ್ಮಿಕರಿಗೆ ಗಾಯ

ಕೋಲಾರ: ಕೋಲಾರದ ಮಾಲೂರು ಬಳಿ ಭೀಕರ ರಸ್ತೆ ಅಪಘಾತವಾಗಿದ್ದು, ಘಟನೆಯಲ್ಲಿ 13 ಮಂದಿ ಕೂಲಿ ಕಾರ್ಮಿಕರಿಗೆ ಗಂಭಿರ ಗಾಯವಾಗಿ ಗಾಯೊಂಡಿದ್ದಾರೆ.

ಮಾಲೂರು ತಾಲೂಕಿನ ಹೂಸೂರು ಮುಖ್ಯ ರಸ್ತೆಯ ಚಿಕ್ಕ ತಿರುಪತಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಟಾಟಾ ಸುಮೋ ಮತ್ತು ಟಿಪ್ಪರ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ.

ಘಟನೆಗೆಯಲ್ಲಿ ಗಾಯಗೊಂಡಿರುವವರನ್ನು ತಮಿಳುನಾಡಿನ ಬೇರಿಕೆ ಅಮದಗೊಂಡನ ಹಳ್ಳಿ ಗ್ರಾಮದವರಾಗಿದ್ದು, ಮಾಲೂರು ತಾಲೂಕಿನ ಕೂಲಿ ಮಾಡಲು ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದ್ದು, ಸದ್ಯ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.