Sunday, 11th May 2025

ಒಂದೇ ಕುಟುಂಬದ 65 ಜನರಿಂದ ಮತದಾನ

ಚಿಕ್ಕಬಳ್ಳಾಪುರ: ಕ್ಷೇತ್ರದ ಒಂದೇ ಕುಟುಂಬದ 65 ಜನರು ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನಗರದ ಬಾದಾಮ್ ಕುಟುಂಬ ಸದಸ್ಯರು ಪ್ರತಿ ಚುನಾವಣೆಯಲ್ಲಿಯೂ ತಪ್ಪದೆ ಮತದಾನ ಮಾಡುತ್ತಾರಂತೆ.

ಬಾದಾಮ್​ ಕುಟುಂಬ ಸದಸ್ಯ ಗೋಪಾಲ ಕೃಷ್ಣ ಮಾತನಾಡಿ, “ನಮ್ಮ ಕುಟುಂಬದ ಒಟ್ಟು 65 ಮತಗಳಿವೆ. ಪ್ರತಿ ಚುನಾವಣೆ ಯಲ್ಲೂ ಎಲ್ಲರೂ ಒಟ್ಟಿಗೆ ತೆರಳಿ ಮತದಾನ ಮಾಡುತ್ತೇವೆ. ಈವರೆಗೂ ಸುಮಾರು 15 ಬಾರಿ ಒಟ್ಟಿಗೆ ಮತದಾನ ಮಾಡಿದ್ದೇವೆ. ಮುಂದಿನ ಚುನಾವಣೆಗಳಲ್ಲೂ ಒಟ್ಟಿಗೆ ಮತದಾನ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ನಮ್ಮ ಹಕ್ಕನ್ನು ಚಲಾಯಿಸು ತ್ತಿದ್ದೇವೆ” ಎಂದು ಹೇಳಿದರು.

ಚಿಕ್ಕಬಳ್ಳಾಪುರ ‌ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಗೊಂದಲವಿಲ್ಲದೇ ನಡೆಯುತ್ತಿದೆ. ಮತಗಟ್ಟೆಗಳ‌ಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.