Monday, 12th May 2025

Viral Video: ಪ್ರೀತಿ ವಿಷ್ಯ ತಿಳಿದು ಮಗಳನ್ನು ವಿದೇಶಕ್ಕೆ ಕಳ್ಸಿದ ಅಪ್ಪ- ಸಿಟ್ಟಿಗೆದ್ದ ಪಾಗಲ್ ಪ್ರೇಮಿಯಿಂದ ಗುಂಡಿನ ದಾಳಿ! ವಿಡಿಯೋ ಇದೆ

Viral News

ಹೈದರಾಬಾದ್:(Crime) ಪ್ರೀತಿ-ಪ್ರೇಮವಿಚಾರವಾಗಿ ಕ್ರೌರ್ಯಗಳು, ಕೊಲೆ, ವಂಚನೆಗಳು ನಡೆಯುವುದು ಹೊಸದೇನಲ್ಲ. ದೇಶದಲ್ಲಿ ಮರ್ಯಾದಾ ಹತ್ಯೆಗಳಿಗೂ ಬರವಿಲ್ಲ. ಇಂಥಹ ಬಹಳಷ್ಟು ಅಪರಾಧ(crime) ಸುದ್ದಿಗಳು ಬರುತ್ತಲೇ ಇರುತ್ತವೆ. ಇದೀಗ ಹೈದರಾಬಾದ್(Hyderabad) ನಲ್ಲಿ ಪ್ರೀತಿ ನಿರಾಕಾರಿಸಿದಕ್ಕೆ ಮಗಳ ಪ್ರಿಯಕರನಿಂದಲೇ ತಂದೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ತಂದೆಯ ಮೇಲೆ ಗುಂಡು(shoot) ಹಾರಿಸಿ ಹಲ್ಲೆ ಮಾಡಿದ್ದಾನೆ. ವ್ಯಕ್ತಿಯೊಬ್ಬನೊಂದಿಗಿನ ಮಗಳ ಪ್ರೇಮ ಸಂಬಂಧ ವಿರೋಧ ಮಾಡಿದ್ದಕ್ಕೆ ಶೂಟ್ ಮಾಡಿ ಕೊಂದಿದ್ದಾನೆ ಎಂದು ಪೊಲೀಸರು(police) ತಿಳಿಸಿದ್ದಾರೆ. ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ(Viral Video).

ತಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರು ಎನ್ನುವ ಕಾರಣಕ್ಕೆ ಪ್ರೇಯಸಿಯ ತಂದೆಯನ್ನೇ ಮಗಳ ಪ್ರಿಯಕರ ಶೂಟ್ ಮಾಡಿರುವ ಘಟನೆ ಹೈದರಾಬಾದ್ ಜಿಲ್ಲೆಯ ರಾಚಕೊಂಡ ಕಮಿಷನರೇಟ್‌ನ ಸರೂರನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟೇಶ್ವರ ಕಾಲೋನಿಯಲ್ಲಿ ಘಟನೆ ನಡೆದಿದೆ. ತನ್ನಿಂದ ಪ್ರೇಯಸಿಯನ್ನು ಬೇರ್ಪಡಿಸಿ ವಿದೇಶಕ್ಕೆ ಕಳುಹಿಸಲು ನಿರ್ಧರಿಸಿದ್ದು, ಗೆಳತಿಯ ತಂದೆಯ ಈ ನಿರ್ಧಾರದಿಂದ ಕೋಪಗೊಂಡ ಪ್ರಿಯಕರ ಈ ದುಷ್ಕೃತ್ಯ ಎಸಗಿದ್ದಾನೆ.

ನಗರದ ಹೆಸರಾಂತ ಉದ್ಯಮಿ ರೇವಂತ್ ಆನಂದ್ ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿಯನ್ನು ಬಲ್ವಿಂದರ್ ಎಂದು ಗುರುತಿಸಲಾಗಿದೆ. ಆನಂದ್ ಅವರ ಮಗಳು ತನ್ನ ಕಾಲೇಜು ಗೆಳೆಯನನ್ನು ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದು, ಅವನ ಜೊತೆ ಓಡಿಹೋಗಿ ಮದುವೆಯಾಗಲು ಸಿದ್ದಳಿದ್ದಳು. ಈ ವಿಚಾರ ತಿಳಿದ ಹುಡುಗಿ ತಂದೆ ಇವರ ಪ್ರೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಗಳಿಗೆ ಬುದ್ದಿವಾದ ಹೇಳಿ, ಆಕೆಯ ಗೆಳಯನಿಂದ ದೂರವಿರುವಂತೆ ಸೂಚಿಸಿದರು. ಎಷ್ಟೇ ಬುದ್ಧಿವಾದ ಹೇಳಿದರೂ ಮಾತ್ರ ಸುಮ್ಮನಾಗದೇ, ತನ್ನ ಹಳೆ ಚಾಳಿಯನ್ನೇ ಮಗಳು ಮುಂದುವರೆಸಿದ್ದು, ಬಲ್ವಿಂದರ್ ಜೊತೆ ತಿರುಗಾಡುವುದು, ಫೋನ್ ಅಲ್ಲಿ ಮಾತಾನಾಡುವುದು ಆನಂದ್ ಗೆ ಗೊತ್ತಾಗಿದೆ.

ಇದರಿಂದ ಆಕ್ರೋಶಗೊಂಡ ಆನಂದ್ ಉಪಾಯ ಮಾಡಿ ಮಗಳನ್ನು ಆಕೆಯ ಪ್ರಿಯಕರನಿಂದ ದೂರ ಮಾಡಲು ವಿದೇಶಕ್ಕೆ ಕಳುಹಿದ್ದಾನೆ. ಆದರೆ ಈ ವಿಷಯ ತಿಳಿದು ಕೋಪೋದ್ರಿಕ್ತಗೊಂಡ ಬಲ್ವಿಂದರ್, ಆನಂದ್ ಅವರ ಮನೆಗೆ ತೆರಳಿ ತನ್ನ ಪ್ರೇಯಸಿಯನ್ನು ವಿದೇಶಕ್ಕೆ ಕಳುಹಿಸದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಆನಂದ್ ಹಾಗೂ ಬಲ್ವಿಂದರ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಬಲ್ವಿಂದರ್ ತನ್ನ ಬಳಿ ಇದ್ದ ಗನ್ ಯಿಂದ ಆನಂದ್ ಗೆ ಶೂಟ್ ಮಾಡಿದ್ದಾನೆ. ಪರಿಣಾಮ ಆನಂದ್ ಕಣ್ಣಿಗೆ ಗುಂಡು ತಗುಲಿದ್ದು, ತೀವ್ರ ರಕ್ತಸ್ತ್ರಾವವಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಗಂಭೀರ ಸ್ಥಿತಿಯಲ್ಲಿದ್ದ ಆನಂದ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದ ಪಾಗಲ್ ಪ್ರೇಮಿ ಬಲ್ವಿಂದರ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹಾಗೂ ಆರೋಪಿಯನ್ನು ಬಂಧಿಸಿದ ಪೊಲೀಸರು ಆತ ಕೊಲೆಗೆ ಬಳಸಿದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರ್ಮಿಕ ಬಲಿ; ಭೀಕರ ದೃಶ್ಯ ಭಾರೀ ವೈರಲ್‌!