Saturday, 10th May 2025

Viral Video: ಮತ್ತೊರ್ವ ಆಟೋ ಚಾಲಕನ ಪುಂಡಾಟ- ಕುಡಿದ ಮತ್ತಿನಲ್ಲಿ ಯುವತಿಗೆ ಕಿರುಕುಳ; ಟ್ರಾಫಿಕ್‌ ಪೊಲೀಸ್‌ಗೆ ಕಪಾಳಮೋಕ್ಷ-ವಿಡಿಯೋ ಇದೆ

Viral video

ಮುಂಬೈ: ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಓಲಾ ಮೂಲಕ ಆಟೋ (Ola auto) ಬುಕ್ ಮಾಡಿ ಬಳಿಕ ಅದನ್ನು ರದ್ದುಗೊಳಿಸಿ ಬೇರೆ ಆಟೋ ಹತ್ತಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ ಆಟೋ ಚಾಲಕನೋರ್ವ ಕಪಾಳಮೋಕ್ಷ ಮಾಡಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಘಟನೆ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಯುವತಿಗೆ ಆಟೋ ಚಾಲಕನೋರ್ವ ಕಿರುಕುಳ ನೀಡಿದ್ದು ಮಾತ್ರವಲ್ಲದೇ ಟ್ರಾಫಿಕ್‌ ಪೊಲೀಸ್‌ಗೂ ಕಪಾಳಮೋಕ್ಷ(Slapping) ಮಾಡಿದ್ದಾನೆ. ಇನ್ನುಈ ಘಟನೆ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಮಹಾರಾಷ್ಟ್ರದ ಉಲ್ಹಾಸ್‌ನಗರದಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಟ್ರಾಫಿಕ್ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕಂಡು ಬಂದಿದೆ. ಆಟೊ ಚಾಲಕ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆತ ಹುಡುಗಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಉಲ್ಲಾಸನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಆಟೋ ಚಾಲಕ ತನ್ನ ಆಟೋವನ್ನು ಫ್ಲೈ ಓವರ್‌ ಮೇಲೆ ನಿಲ್ಲಿಸಿ ಯುವತಿಗೆ ಕಿರುಕುಳ ನೀಡಿದ್ದಾನೆ. ಇದನ್ನು ನೋಡಿದ ಸಂಚಾರಿ ಪೊಲೀಸ್ ಅಧಿಕಾರಿ ಮೋಹನ್ ಪಾಟೀಲ್ ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಟ್ರಾಫಿಕ್ ಪೊಲೀಸರು ಅವರನ್ನು ಸೆಂಟ್ರಲ್ ಪೊಲೀಸ್ ಠಾಣೆಗೆ ಕರೆದೊಯ್ಯಲು ಪ್ರಯತ್ನಿಸಿದಾಗ ಆಟೋ ಚಾಲಕ ಆಟೋವನ್ನು ಅಲ್ಲೇ ಬಿಟ್ಟು ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಬಳಿಕ ಮತ್ತೆ ಛತ್ರಪತಿ ಶಾಹು ಮಹಾರಾಜ್ ಮೇಲ್ಸೇತುವೆ ಬಳಿ ಬಂದು ಆಟೊ ವಾಪಸ್ ಪಡೆಯುವಂತೆ ಪಟ್ಟು ಹಿಡಿದರು.

ಆಗ ಆಟೋ ಚಾಲಕ ಟ್ರಾಫಿಕ್ ಪೊಲೀಸರಿಗೆ ಕಪಾಳಮೋಕ್ಷ ಮಾಡಿ, ಹಲ್ಲೆ ನಡೆಸಿದ್ದಾನೆ. ಉದ್ವಿಗ್ನತೆ ಹೆಚ್ಚಾದಾಗ, ಆಟೋ ರಿಕ್ಷಾ ಚಾಲಕ ಮತ್ತು ಟ್ರಾಫಿಕ್ ಅಧಿಕಾರಿ ನಡುವೆ ತೀವ್ರ ವಾಗ್ವಾದ ನಡೆಯಿತು. ಬಳಿಕ, ಆಟೋ ಚಾಲಕ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾನೆ.

ಇನ್ನು ಘಟನೆ ಬಗ್ಗೆ ಪಾಟೀಲ್‌ ಪ್ರತಿಕ್ರಿಯಿಸಿದ್ದು, “ನಾವು ಛತ್ರಪತಿ ಶಿವಾಜಿ ಮಹಾರಾಜ್ ಫ್ಲೈಓವರ್ ಬಳಿ ಕರ್ತವ್ಯದಲ್ಲಿದ್ದಾಗ ಕೆಲವು ಮದ್ಯಪಾನ ಮಾಡಿದ್ದ ಆಟೋ ಚಾಲಕ ಮತ್ತು ಮತ್ತೊರ್ವ ವ್ಯಕ್ತಿ ಹುಡುಗಿಗೆ ಕಿರುಕುಳ ನೀಡುತ್ತಿದ್ದುದ್ದನ್ನು ಗಮನಿಸಿದ್ದೇವೆ. ನಾವು ಮಧ್ಯಪ್ರವೇಶಿಸಲು ಮುಂದಾದಾಗ, ಅವರು ನನ್ನ ಮೇಲೆ ನೀರು ಎಸೆದು, ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ನನ್ನ ಕಿವಿಗೆ ಗಾಯಗಳಾಗಿವೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video : ಆಟೋ ಬುಕ್ ಮಾಡಿ ರದ್ದು ಮಾಡಿದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಚಾಲಕ ಅರೆಸ್ಟ್‌

Leave a Reply

Your email address will not be published. Required fields are marked *