Sunday, 11th May 2025

Viral News: ಕೊಲೆಯ ಬಗ್ಗೆ ಅನುಭವ ಪಡೆಯಲು ಕ್ರಿಮಿನಾಲಜಿ ಸ್ಟೂಡೆಂಟ್ ಮಾಡಿದ್ದೇನು?

Murder Case

ಇಂಗ್ಲೆಂಡ್‍: 20 ವರ್ಷದ ಕ್ರಿಮಿನಾಲಜಿ ವಿದ್ಯಾರ್ಥಿಯೊಬ್ಬ ಕೊಲೆಯ ಬಗ್ಗೆ ತನಗಿರುವ ಕುತೂಹಲವನ್ನು ತಣಿಸಿಕೊಳ್ಳಲು ಭಯಾನಕವಾದ ಕೊಲೆಗೆ ಸಂಚು ರೂಪಿಸಿರುವ ಆಘಾತಕಾರಿ ಘಟನೆಯೊಂದು ಇಂಗ್ಲೆಂಡ್‌ನಲ್ಲಿ ಬೆಳಕಿಗೆ ಬಂದಿದೆ. ಈ ಆರೋಪಿಯನ್ನು ಕ್ರೊಯ್ಡನ್‍ನ ನಾಸೆನ್ ಸಾದಿ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಮೇ 24 ರಂದು ಬೌರ್ನ್ ಮೌತ್‌ನಲ್ಲಿ ನಡೆದ ಭೀಕರ ಬೀಚ್ ಸೈಡ್ ದಾಳಿಯ ಸಂದರ್ಭದಲ್ಲಿ 34 ವರ್ಷದ ಅಮಿ ಗ್ರೇ ಅವರ ಕೊಲೆ(Viral News) ಮತ್ತು 38 ವರ್ಷದ ಲಿಯಾನ್ ಮೈಲ್ಸ್ ಅವರ ಮೇಲೆ ಕೊಲೆಗೆ ಪ್ರಯತ್ನಿಸಿದ ಆರೋಪ ಹೊರಿಸಲಾಗಿದೆ.

ಸಾದಿ ತನ್ನ ದಾಳಿಯನ್ನು ರೂಪಿಸಲು ಒಂದು ತಿಂಗಳು ಕಾಲ ಯೋಜನೆ ಹಾಕಿಕೊಂಡಿದ್ದಾನೆ ಎಂದು ವಿಂಚೆಸ್ಟರ್ ಕ್ರೌನ್ ಕೋರ್ಟ್‍ಗೆ ತಿಳಿಸಲಾಗಿದೆ. “ಜೀವವನ್ನು ತೆಗೆಯುವುದು ಹೇಗಿರುತ್ತದೆ ಎಂದು ಅವನು ಬಯಸಿದ್ದನಂತೆ. ಬಹುಶಃ ಇದು ಈ ಕುತೂಹಲಕಾರಿ ಭಾವನೆಯನ್ನು ಹೆಚ್ಚು ಮಾಡಿರಬಹುದು ಎಂದು ವಕೀಲರು ಕೋರ್ಟ್‍ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Murder Case

ಕೊಲೆಗೆ ಬಳಸುವ ಚಾಕು, ಮಚ್ಚು ಮತ್ತು ಯಾವ ಹೋಟೆಲ್‍ಗಳಲ್ಲಿ ಸಿಸಿಟಿವಿ ಇಲ್ಲ ಎಂಬ ವಿಚಾರವನ್ನು ಸಾದಿ ಆನ್‍ಲೈನ್‍ನಲ್ಲಿ ಹುಡುಕಾಡಿದ್ದಾನೆ. ಅಲ್ಲದೇ ಅವನು ವಿಶ್ವವಿದ್ಯಾಲಯದ ಉಪನ್ಯಾಸಗಳಲ್ಲಿ ಭಾಗವಹಿಸಿ ಅಲ್ಲಿ  ವಿಧಿವಿಜ್ಞಾನ ಪುರಾವೆಗಳು ಮತ್ತು ಸ್ವಯಂ-ರಕ್ಷಣಾ ಸನ್ನಿವೇಶಗಳ ಬಗ್ಗೆ ಗೊಂದಲಮಯ ಪ್ರಶ್ನೆಗಳನ್ನು ಕೇಳಿದ್ದಾನೆ. ಇದಕ್ಕೆ  “ನೀವು ಕೊಲೆಗೆ ಯೋಜಿಸುತ್ತಿಲ್ಲ, ಅಲ್ಲವೇ?” ಎಂದು ಉಪನ್ಯಾಸಕರೊಬ್ಬರು ತಮಾಷೆ ಮಾಡಿದ್ದಾರೆ ಹಾಗೂ ಇದಕ್ಕೆ ಸಾದಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ವಕೀಲರು ಕೋರ್ಟ್‍ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೇ ದಾಳಿಯ ರಾತ್ರಿ, ಬೌರ್ನ್ ಮೌತ್‌ನಲ್ಲಿ ಟ್ರಾವೆಲ್‌ಲಾಡ್ಜ್‌ ಅನ್ನು ಬುಕ್ ಮಾಡಿದ್ದ ಸಾದಿ, ದಿ ಸ್ಟ್ರೇಂಜರ್ಸ್ – ಚಾಪ್ಟರ್ 1 ಅನ್ನು ನೋಡಿದ್ದಾನೆ. ಇದು ದಾಳಿಗೆ ಸ್ಫೂರ್ತಿಯ ಮೂಲವಾಗಿರಬಹುದು ಎಂದು ವಕೀಲರು ಹೇಳಿದ್ದಾರೆ. ಹಾಗೇ ಆತ ಬೀಚ್‍ನಲ್ಲಿ ಸುತ್ತಾಡಿ ನಂತರ  ಮಹಿಳೆಯರ ಮೇಲೆ ಕ್ರೂರವಾಗಿ ಚಾಕುವಿನಿಂದ  ದಾಳಿ ಮಾಡಿದ್ದಾನೆ. ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅವರನ್ನು ಬೆನ್ನಟ್ಟಿ ದಾಳಿ ಮಾಡಿದ್ದಾನೆ. ಇದರಿಂದಾಗಿ ಪೂಲ್‍ನ ಫುಟ್ಬಾಲ್ ತರಬೇತುದಾರ ಅಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇನ್ನು ಲಿಯಾನ್ ತನ್ನ ಎದೆ ಮತ್ತು ಬೆನ್ನಿಗೆ ಅನೇಕ ಇರಿತದ ಗಾಯಗಳನ್ನು ಅನುಭವಿಸಿದ ನಂತರ ಬದುಕುಳಿದು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ ಉಬರ್ ಚಾಲಕನಿಗೆ ಸಿಕ್ಕ ಈ ಕಾಮೆಂಟ್‌; ಏನಿದು?

ದಾಳಿಯ ನಂತರ, ಸಾದಿ ತನ್ನ ಆಯುಧವನ್ನು ವಿಲೇವಾರಿ ಮಾಡಿ, ಬಟ್ಟೆಗಳನ್ನು ಬದಲಾಯಿಸಿದ್ದಾನೆ ನಂತರ ಏನು ಮಾಡಿಲ್ಲದವನಂತೆ ಇದ್ದು ಬಿಟ್ಟಿದ್ದಾನೆ ಎಂದು ವರದಿಯಾಗಿದೆ.