Saturday, 10th May 2025

Viral News: ಗೂಗಲ್‌ ಮ್ಯಾಪ್ ನಂಬಿ ಆರೋಪಿಯನ್ನು ಬೆನ್ನಟ್ಟುತ್ತಾ ಬಾರ್ಡರ್‌ ದಾಟಿದ ಪೊಲೀಸರಿಗೆ ಕೊನೆಗೆ ಆಗಿದ್ದೇನು?

Assam Shocker

ಗುವಾಹಟಿ: ಜಿಪಿಎಸ್ ನ್ಯಾವಿಗೇಷನ್ ತಪ್ಪಾದ ಮಾರ್ಗವನ್ನು ತೋರಿಸಿ ಅಸ್ಸಾಂ(Assam Shocker) ಪೊಲೀಸ್ ಅಧಿಕಾರಿಗಳು ನಾಗಾಲ್ಯಾಂಡ್‍ಗೆ ತಲುಪುವಂತೆ ಮಾಡಿ ಅಲ್ಲಿನ ಸ್ಥಳೀಯರ ಕೈಯಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಇತ್ತೀಚೆಗೆ ನಡೆದಿರುವುದಾಗಿ ವರದಿಯಾಗಿದೆ. ಅಸ್ಸಾಂ ಪೊಲೀಸ್ ಅಧಿಕಾರಿಗಳು  ಗೂಗಲ್ ನಕ್ಷೆ ಬಳಸಿಕೊಂಡು ಹೋಗುತ್ತಿದ್ದಾಗ ಈ ಅವಗಢ ಸಂಭವಿಸಿದೆ. ಅಪ್ಲಿಕೇಶನ್ ಆರಂಭದಲ್ಲಿ ಈ ಸ್ಥಳವು ರಾಜ್ಯ ವ್ಯಾಪ್ತಿಯಲ್ಲಿದೆ ಎಂದು ಸೂಚಿಸಿತು. ಆದರೆ ನಂತರ ಅವರನ್ನು ನಾಗಾಲ್ಯಾಂಡ್‍ಗೆ ಹೋಗುವಂತೆ ಮಾಡಿದೆ(Viral News).

ಪೊಲೀಸ್ ಅಧಿಕಾರಿಗಳು ನ್ಯಾವಿಗೇಷನ್‍ಗಾಗಿ ಗೂಗಲ್ ಮ್ಯಾಪ್‍ ಅನ್ನು ಬಳಸಿದ್ದಾರೆ. ಆದರೆ ಅದು ತಪ್ಪಾದ ನಿರ್ದೇಶನಗಳನ್ನು ನೀಡಿ ಅವರನ್ನು ದಾರಿತಪ್ಪಿಸಿದೆ. ಇದರಿಂದಾಗಿ 16 ಅಸ್ಸಾಂ ಪೊಲೀಸ್ ಅಧಿಕಾರಿಗಳು ನಾಗಾಲ್ಯಾಂಡ್‍ಗೆ ಬಂದು ತಲುಪಿದ್ದಲ್ಲದೇ ಅಲ್ಲಿ ತೊಂದರೆಗೆ ಸಿಲುಕುವಂತೆ ಮಾಡಿದೆ. ಮಂಗಳವಾರ (ಜನವರಿ 7ರಂದು) ರಾತ್ರಿ ಜೋರ್ಹತ್ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.

‘ಅಸ್ಸಾಂ’ನ ಚಹಾ ತೋಟ ಪ್ರದೇಶದಲ್ಲಿ ಅಡಗಿದ್ದ ಅಪರಾಧಿಯನ್ನು ಬಂಧಿಸುವ ಗುರಿಯನ್ನು ಹೊಂದಿದ್ದ ಪೊಲೀಸರು ಆತನನ್ನು ಬೆನ್ನಟ್ಟುತ್ತಿದ್ದಾಗ, ಈ ಘಟನೆ ಸಂಭವಿಸಿದೆ. ಆದರೆ ಪೊಲೀಸರು ಅಪರಾಧಿಯನ್ನು ಸೆರೆಹಿಡಿಯುವ ಬದಲು ಅವರೇ ಸ್ಥಳೀಯರ ಸೆರೆಗೆ ಸಿಲುಕಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅಸ್ಸಾಂ ಪೊಲೀಸ್ ಅಧಿಕಾರಿಗಳನ್ನು ನಾಗಾಲ್ಯಾಂಡ್ ಜನರು ವಶಕ್ಕೆ ಪಡೆದಿದ್ದಾರೆ. ವರದಿಗಳ ಪ್ರಕಾರ, ಸ್ಥಳೀಯರು ಪೊಲೀಸರನ್ನು ದುಷ್ಕರ್ಮಿಗಳು ಎಂದು ಭಾವಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಹಲ್ಲೆಯ ವೇಳೆ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮ್ಯಾಪ್‌ ರಾಜ್ಯದಲ್ಲಿರುವ ಸ್ಥಳವನ್ನು ತೋರಿಸಿದೆ. ಆದರೆ ಈ ಸ್ಥಳವು ವಾಸ್ತವವಾಗಿ ನಾಗಾಲ್ಯಾಂಡ್‍ನ ಭಾಗವಾಗಿತ್ತು. ಈ ವಿಷಯವನ್ನು ಮೊಕೊಕ್ಚುಂಗ್ ಪೊಲೀಸ್ ವರಿಷ್ಠಾಧಿಕಾರಿಯ ಗಮನಕ್ಕೆ ತಂದಾಗ, ಅವರ ಒಂದು ತಂಡವು ಸ್ಥಳಕ್ಕೆ ಭೇಟಿ ನೀಡಿ 16 ಅಸ್ಸಾಂ ಪೊಲೀಸ್ ತಂಡವನ್ನು ರಕ್ಷಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ತಪ್ಪಿಸಿಕೊಂಡು ಓಡುತ್ತಿದ್ದ ಚಿರತೆಯ ಬಾಲ ಹಿಡಿದು ಗ್ರಾಮಸ್ಥರನ್ನು ರಕ್ಷಿಸಿದ! ವಿಡಿಯೊ ವೈರಲ್

ಗೂಗಲ್ ಮ್ಯಾಪ್‍ ಬಳಸಿ ಜನರು ಅಪಾಯಕ್ಕೆ ಸಿಲುಕಿದ್ದು ಇದೇ ಮೊದಲಲ್ಲ. ಈ ಹಿಂದೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಜಿಪಿಎಸ್ ಬಳಸಿ  ಬಂದ ಕಾರೊಂದಯ ಸೇತುವೆಯ ಕೆಳಗೆ ಬಿದ್ದು ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ  ಮೂರು ಜನರು ಜೀವಗಳನ್ನು ಕಳೆದುಕೊಂಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಈ ಘಟನೆ ನಡೆದಿತ್ತು.

Leave a Reply

Your email address will not be published. Required fields are marked *