Saturday, 10th May 2025

Crime News: ಪೊಲೀಸ್‌ ಪೇದೆ ಜೊತೆ ಲವ್ವಿಡವ್ವಿ, ಪತಿಯ ಕೊಲೆ ಯತ್ನ; ಇಬ್ಬರ ಬಂಧನ

coorg murder attempt

ಮಡಿಕೇರಿ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ, ಮಹಿಳೆಯೊಬ್ಬಳು ತನ್ನ ಪ್ರಿಯಕರ ಪೊಲೀಸ್‌ ಪೇದೆಯ ಜೊತೆ ಸೇರಿ ಗಂಡನನ್ನು ಕೊಲ್ಲಲು (Murder Attempt) ಯತ್ನಿಸಿದ್ದಾಳೆ. ಇಬ್ಬರನ್ನೂ ಪೊಲೀಸರು (Coorg Crime news) ಬಂಧಿಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಘಟನೆ ನಡೆದಿದೆ. ಶನಿವಾರಸಂತೆ ಠಾಣೆಯ ಪೊಲೀಸ್​ ಪೇದೆ ಕೊಟ್ರೇಶ್​ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಆಯಿಷಾ ಎಂಬವಳ ಜೊತೆಗೆ ಅಕ್ರಮ ದೈಹಿಕ ಸಂಬಂಧ ಬೆಳೆಸಿದ್ದ. ಪ್ರೇಯಸಿಯ ಪತಿಯನ್ನು ಕೊಲೆ ಮಾಡಲು ಯತ್ನಿಸಿ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಕೊಲೆ ಮಾಡಲು ಯತ್ನಿಸಿದ ಪೊಲೀಸ್​ ಪೇದೆ ​​​​ಕೊಟ್ರೇಶ್​ (30) ಮತ್ತು ಕೊಲೆಗೆ ಯತ್ನಕ್ಕೆ ಕುಮ್ಮಕ್ಕು ನೀಡಿದ ಕೊಟ್ರೇಶ್​ ಪ್ರಿಯತಮೆ ಆಯಿಷಾ (29)ಳನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್​ ಪೇದೆ ಕೋಟ್ರೆಶ್​ ಪ್ರೇಯಸಿ ಆಯಿಷಾಳ ಪಕ್ಕದ ಮನೆಯಲ್ಲಿ ವಾಸವಾಗಿದ್ದ. ಇಬ್ಬರಿಗೂ ಅಕ್ರಮ ಸಂಬಂಧವಿತ್ತು. ಆಯಿಷಾ ಪೊಲೀಸ್​ ಪೇದೆ ​​​​​ಕೊಟ್ರೇಶ್​ನನ್ನು ಮಂಗಳವಾರ ಮಧ್ಯರಾತ್ರಿ ಮನೆಗೆ ಕರೆಸಿದ್ದಾಳೆ. ಬಳಿಕ, ಕೊಟ್ರೇಶ್​​ ದಿಂಬಿನಿಂದ ಉಸಿರುಗಟ್ಟಿಸಿ ಆಯಿಷಾ ಪತಿ ಇಫ್ರಾಜ್​ರನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಪಕ್ಕದ ಕೋಣೆಯಲ್ಲಿ ಮಲಗಿದ್ದ ಇಫ್ರಾಜ್​​ ಅವರ ಅಕ್ಕನ ಮಗ ತಡೆದು ಇಫ್ರಾಜ್​ರನ್ನು ಬಚಾವ್​​ ಮಾಡಿದ್ದಾರೆ.

ಇಫ್ರಾಜ್​ ಈ ಬಗ್ಗೆ ಕೊಡಗು ಎಸ್​ಪಿ ರಾಮರಾಜನ್​​ ಅವರಿಗೆ ದೂರು ನೀಡಿದ್ದು, ಎಸ್​ಪಿ ಸೂಚನೆ ಮೇರೆಗೆ ಎಫ್​ಐಆರ್​ ದಾಖಲಾಗಿದೆ. ಆರೋಪಿ ಕೊಟ್ರೇಶ್​ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Naxalite Encounter: ಮಹಾರಾಷ್ಟ್ರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌, ಐವರು ನಕ್ಸಲರು ಸಾವು