Sunday, 11th May 2025

Yukta Mukhi: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಪತಿಯಿಂದ ಒತ್ತಾಯ; ವೈವಾಹಿಕ ಜೀವನದ ಸಂಕಟ ಹಂಚಿಕೊಂಡ ಮಾಜಿ ವಿಶ್ವ ಸುಂದರಿ

Yukta Mukhi

ಹಾಸಿಗೆಯಲ್ಲಿ ಪತಿ ತನ್ನೊಂದಿಗೆ ಪ್ರಾಣಿಯಂತೆ ವರ್ತಿಸುತ್ತಿದ್ದ. ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸುತ್ತಿದ್ದ. ಇದನ್ನು ವಿರೋಧಿಸಿದರೆ ತಮ್ಮ ಮೇಲೆ ಹಲ್ಲೆಯನ್ನು ನಡೆಸುತ್ತಿದ್ದ ಎಂದು ಮಾಜಿ ವಿಶ್ವ ಸುಂದರಿ (Former Miss World), ಬಾಲಿವುಡ್ ನಟಿ (Bollywood actress) ಯುಕ್ತಾ ಮುಖಿ (Yukta Mukhi) ತಮ್ಮ ಪತಿ ಪ್ರಿನ್ಸ್ ತುಲಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮದುವೆಯ ಬಳಿಕ ತಮ್ಮ ಜೀವನ ಸರಪಳಿಯಲ್ಲಿ ಕಟ್ಟಿದಂತಾಗಿತ್ತು. ತಾವು ಬಹುದೊಡ್ಡ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಾಯಿತು ಎಂದಿರುವ ಯುಕ್ತಾ, ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಪತಿ ಹಾಸಿಗೆಯಲ್ಲಿ ತಮ್ಮೊಂದಿಗೆ ಅಮಾನುಷ ಕೃತ್ಯಗಳನ್ನು ಮಾಡುತ್ತಿದ್ದ. ನಿರಾಕರಿಸಿದಾಗ ತಮಗೆ ಹೊಡೆಯುತ್ತಿದ್ದ ಎಂದು ಯುಕ್ತಾ ಆರೋಪಿಸಿದ್ದಾರೆ.

ಯುಕ್ತಾ ಮುಖಿ ಅವರು 1999ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದಿದ್ದು, 2008ರಲ್ಲಿ ಪ್ರಿನ್ಸ್ ತುಲಿ ಅವರನ್ನು ವಿವಾಹವಾಗಿದ್ದರು. 2014ರಲ್ಲಿ ಇವರಿಬ್ಬರು ವಿವಾಹ ವಿಚ್ಛೇದನವನ್ನು ಪಡೆದರು.

Yukta Mukhi

ಈವರೆಗೆ ಭಾರತ 6 ಬಾರಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದಿದೆ. ಈ ನಡುವೆ ಇತ್ತೀಚೆಗಷ್ಟೇ ತನ್ನ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿರುವ ವಿಶ್ವ ಸುಂದರಿ ಯುಕ್ತಾ ಮುಖಿ ಮದುವೆಯ ಬಳಿಕ ತಾವು ಅನುಭವಿಸಿದ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಹಾಸಿಗೆಯಲ್ಲಿ ತಮ್ಮ ಪತಿ ತನ್ನೊಂದಿಗೆ ಪ್ರಾಣಿಯಂತೆ ವರ್ತಿಸುತ್ತಿದ್ದನು. ತಾನು ವಿರೋಧಿಸಿದಾಗ ಥಳಿಸುತ್ತಿದ್ದ ಎಂದು ಯುಕ್ತಾ ಹೇಳಿಕೊಂಡಿದ್ದಾರೆ.

Yukta Mukhi

ಯುಕ್ತಾ ತಮ್ಮ ವೈವಾಹಿಕ ಜೀವನದ ಬಗ್ಗೆ ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದು, ಇದರಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಅಸ್ವಾಭಾವಿಕ ಲೈಂಗಿಕತೆಯ ಆರೋಪಗಳೂ ಸೇರಿವೆ.

1999ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದ ಯುಕ್ತಾ ಮುಖಿ ಬಾಲಿವುಡ್‌ನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಬಳಿಕ ಅವರು 2008ರಲ್ಲಿ ನಾಗ್ಪುರದ ಉದ್ಯಮಿ ಪ್ರಿನ್ಸ್ ತುಲಿಯನ್ನು ವಿವಾಹವಾದರು. ಆದರೆ ಇವರ ದಾಂಪತ್ಯ ಜೀವನವು ಹೆಚ್ಚು ಕಾಲ ಉಳಿಯಲಿಲ್ಲ.

Yukta Mukhi

ಪತಿಯ ಅಸಹ್ಯ ವರ್ತನೆಯ ಬಗ್ಗೆ ಬಹಿರಂಗ ಪಡಿಸಿದ ಯುಕ್ತಾ, ಸಿನಿಮಾದಲ್ಲಿ ಕೆಲಸ ಮಾಡಲು ಆತ ಬಿಡುತ್ತಿರಲಿಲ್ಲ ಎಂದು ದೂರಿದ್ದಾರೆ.

ಯುಕ್ತಾ ತಮ್ಮ ಪತಿಯ ಬಗ್ಗೆ ಮತ್ತೊಂದು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಮದುವೆಯ ಅನಂತರ ತಾವು ಗಂಡನ ಮನೆಗೆ ಬಂದಾಗ ವಿಚಿತ್ರವಾಗಿ ಸ್ವಾಗತಿಸಿದ. ಆತ ತನ್ನ ಗೆಳತಿಯರೊಂದಿಗೆ ನನ್ನನ್ನು ಸ್ವಾಗತಿಸಿದ್ದ. ಆಗ ನಾನು ಅದನ್ನು ತಮಾಷೆ ಎಂದುಕೊಂಡಿದ್ದೆ. ಆದರೆ ಬಳಿಕ ತಿಳಿಯಿತು ಆತನಿಗೆ ಅನೇಕ ಗೆಳತಿಯರು ಇದ್ದಾರೆಂದು ಎಂಬುದಾಗಿ ಯುಕ್ತ ಹೇಳಿಕೊಂಡಿದ್ದಾರೆ.

Actor Manoj Mishra: ನಡುಬೀದಿಯಲ್ಲಿ ನಟ-ನಿರ್ದೇಶಕನ ನಡುವೆ ಬಿಗ್‌ ಫೈಟ್‌! ಡಿಸಿಪಿ ಕಚೇರಿ ಎದುರೇ ಹೈಡ್ರಾಮಾ

ಪತಿಯಿಂದ ವಿಚ್ಛೇದನ ಪಡೆದ ಬಳಿಕ ಯುಕ್ತಾ ಮುಖಿ ಆಧ್ಯಾತ್ಮಿಕತೆಯತ್ತ ಮುಖ ಮಾಡಿದ್ದಾರೆ. ಅವರು ಈಗ ರೆಸ್ಟೋರೆಂಟ್ ವೊಂದನ್ನು ನಡೆಸುತ್ತಿದ್ದು, ವೈಯಕ್ತಿಕ ಜೀವನದಲ್ಲಿ ಶಾಂತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.