Sunday, 11th May 2025

ಪ್ರಿಯಕರನ ಜತೆ ಇರುತ್ತೇನೆ, ಖರ್ಚನ್ನು ಗಂಡನೇ ಭರಿಸಲಿ: ಮಹಿಳೆಯ ವಿಚಿತ್ರ ಬೇಡಿಕೆ

ತ್ತರಪ್ರದೇಶ: ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಮಹಿಳೆಯು, ಗಂಡನ ಜತೆ ಇರಲು ಸಾಧ್ಯವಿಲ್ಲ, ಪ್ರಿಯಕರನ ಜತೆ ಇರುತ್ತೇನೆ. ಆದರೆ ಖರ್ಚನ್ನು ಗಂಡನೇ ಭರಿಸಲಿ ಎಂದು ಮಹಿಳೆ ಹೇಳಿದ್ದಾಳೆ. ಆಗ್ರಾದಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಾಯ್ ಫ್ರೆಂಡ್ ಜೊತೆ ಇರುತ್ತೇನೆ. ಆದರೆ ಅವರ ಎಲ್ಲಾ ಖರ್ಚನ್ನು ಪತಿಯೇ ಭರಿಸಬೇಕು. ನನ್ನ ಗೆಳೆಯ ನಿಗೂ ಹೆಂಡತಿ ಮಕ್ಕಳಿದ್ದಾರೆ. ಅವರ ಖರ್ಚೇ ಅವರಿಗೆ ಸಾಕಾಗುತ್ತದೆ. ಹಾಗಾಗಿ ನಮ್ಮ ತಿಂಗಳ ಖರ್ಚನ್ನು ನನ್ನ ಪತಿಯೇ ಭರಿಸಬೇಕು ಎಂದು ಮಹಿಳೆ ಆಗ್ರಹಿಸಿದ್ದಾಳೆ.

ಈ ವಿಚಾರವಾಗಿ, ಪತಿ-ಪತ್ನಿ ಇಬ್ಬರೂ ಸ್ಥಳೀಯ ಕೌಟುಂಬಿಕ ಸಲಹಾ ಕೇಂದ್ರಕ್ಕೆ ತೆರಳಿದ್ದರು. ಅಲ್ಲಿಯೂ ಮಹಿಳೆಯ ವಿಚಿತ್ರ ಆಸೆ ಕೇಳಿದ ಸಿಬ್ಬಂದಿ.. ಬೆಚ್ಚಿಬಿದ್ದಿದ್ದಾರೆ.

ಇದೇ ವೇಳೆ ಅವರಿಗೆ ಕೌನ್ಸೆಲಿಂಗ್ ನಡೆಸುತ್ತಿರುವ ಮನಶ್ಶಾಸ್ತ್ರಜ್ಞ ಅಮಿತ್ ಅವರು ಪ್ರತಿಕ್ರಿಯಿಸಿ, ಅವರು ಮದುವೆಯಾಗಿ 10 ವರ್ಷಗಳಾಗಿದ್ದು, ಆಕೆ ಈಗ ತನ್ನ ಗೆಳೆಯನೊಂದಿಗೆ ವಾಸಿಸಲು ಬಯಸಿದ್ದಾಳೆ. ಆದರೆ ಪತಿಯಿಂದ ಮಾಸಿಕ ಖರ್ಚು ಕೇಳುತ್ತಿದ್ದಳು ಎನ್ನಲಾಗಿದೆ. ಮಹಿಳೆಯ ಮನಸ್ಸು ಬದಲಾಯಿಸಲು ಪ್ರಯತ್ನಿಸುವುದಾಗಿ ಅಮಿತ್ ಹೇಳಿದ್ದಾರೆ.

Leave a Reply

Your email address will not be published. Required fields are marked *