Wednesday, 14th May 2025

ಕುಡಿಯುವ ನೀರೆಂದು ಹೇರ್ ಡೈ ಬೆರೆಸಿದ ನೀರನ್ನ ಸೇವಿಸಿ ಸಾವು

ಬಿಹಾರ:  ರಾಜ್ಯದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಕುಡಿಯುವ ನೀರೆಂದು ಭಾವಿಸಿ, ಹೇರ್ ಡೈ ಬೆರೆಸಿದ ನೀರನ್ನ ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಮೃತಳನ್ನ ಲಾಲ್ಮತಿ ದೇವಿ (60) ಎಂದು ಗುರುತಿಸಲಾಗಿದೆ. ಜಿಲ್ಲೆಯ ಮಾಂಜಾಘರ್ ಬ್ಲಾಕ್ʼನ ಭೈಸಾಹಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮೃತ ಮಹಿಳೆ ದೃಷ್ಟಿ ಹೀನಳಾಗಿದ್ದು, ಗಾಜಿನಲ್ಲಿ ಇರಿಸಲಾದ ಹೇರ್ ಡೈ ರಾಸಾಯನಿಕವನ್ನ ನೀರೆಂದು ತಿಳಿದು ಕುಡಿದಿದ್ದಾಳೆ. ಬಳಿಕ ಆಕೆಯನ್ನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾಳೆ.

ಮೃತರ ಸೊಸೆ ಹೇರ್ ಡೈಯನ್ನ ನೀರಿನಲ್ಲಿ ಕರಗಿಸಿ ಗಾಜಿನ ಲೋಟದಲ್ಲಿ ಇಟ್ಟು, ಅಡುಗೆ ಮನೆಗೆ ಹೋಗಿದ್ದು, ಬಾಯಾರಿಕೆ ಯಾದ ಅತ್ತೆ ಅದನ್ನ ನೀರು ಎಂದು ತಪ್ಪಾಗಿ ಗ್ರಹಿಸಿ ಹೇರ್ ಡೈ ರಾಸಾಯನಿಕವನ್ನ ಸೇವಿಸಿದ್ದಾರೆ.

ಅವಳ ಆರೋಗ್ಯವು ಕ್ರಮೇಣ ಹದಗೆಡಲು ಪ್ರಾರಂಭಿಸಿತು. ಕುಟುಂಬ ಸದಸ್ಯರು ಅವಳನ್ನ ಗೋಪಾಲ್ ಗಂಜ್ ಸದರ್ ಆಸ್ಪತ್ರೆಯ ತುರ್ತು ವಾರ್ಡ್ʼಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು.

 

Leave a Reply

Your email address will not be published. Required fields are marked *