Monday, 12th May 2025

ಚಳಿಗಾಲದ ಅಧಿವೇಶನ ಮುಕ್ತಾಯ

#Wintersession

ನವದೆಹಲಿ: ಲೋಕಸಭೆ ಇಂದು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದು, ಚಳಿಗಾಲದ ಅಧಿವೇಶನ ಮುಕ್ತಾಯವಾದಂತಾಗಿದೆ.

ಅಧಿವೇಶನ 18 ಬಾರಿ ಸಮಾವೇಶಗೊಂಡಿದ್ದು, ಕೃಷಿ ಕಾನೂನುಗಳ ವಾಪಸಾತಿ, ವಿಧೇಯಕ ಮತ್ತು ಚುನಾವಣಾ ಕಾನೂನುಗಳ (ತಿದ್ದುಪಡಿ) ವಿಧೇಯಕ ದಂತಹ ಕೆಲವು ಪ್ರಮುಖ ಶಾಸನಗಳಿಗೆ ಅಂಗೀ ಕಾರ ನೀಡಿತು.

ಬೆಲೆ ಏರಿಕೆ ಮತ್ತು ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಂತಹ ಹಲವಾರು ಸಮಸ್ಯೆಗಳ ಕುರಿತು ಪ್ರತಿಪಕ್ಷಗಳ ಸದಸ್ಯರು ಅಡ್ಡಿಪಡಿಸಿದ್ದರಿಂದ ಅಧಿವೇಶನದ 18 ಗಂಟೆಗಳು ಮತ್ತು 48 ನಿಮಿಷಗಳು ವ್ಯರ್ಥವಾದವು.

ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಳ್ಳಬೇಕಾಗಿದ್ದ ಒಂದು ದಿನ ಮುಂಚೆಯೇ ಮೇಲ್ಮನೆ (ರಾಜ್ಯಸಭೆ)ಯನ್ನು ಅನಿರ್ದಿಷ್ಟಾವಧಿ ಮುಂದೂ ಡಲಾಯಿತು. ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್ 29ರಂದು ಆರಂಭಗೊಂಡಿತು ಮತ್ತು ಡಿ.23ರಂದು ಮುಕ್ತಾಯಗೊಳ್ಳಬೇಕಾಗಿತ್ತು.