Thursday, 15th May 2025

ಡಿ.31ರಿಂದ ಉತ್ತರಪ್ರದೇಶದಲ್ಲಿ 15 ದಿನ ಚಳಿಗಾಲದ ರಜೆ

ಲಕ್ನೋ: ಕೋವಿಡ್ -19ರ ರೂಪಾಂತರಿ ವೈರಸ್ ಓಮಿಕ್ರಾನ್ ಹೆಚ್ಚುತ್ತಿರುವ ಬೆನ್ನಲ್ಲೆ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡ ಯುಪಿ ಸರ್ಕಾರವು ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಡಿ.31, 2021 ರಿಂದ 15 ದಿನಗಳ ಕಾಲ ಉತ್ತರ ಪ್ರದೇಶದಲ್ಲಿ ಚಳಿಗಾಲದ ರಜಾದಿನಗಳು ಇರುತ್ತವೆ.

ರಾಜ್ಯದಾದ್ಯಂತ ಡಿ.31 ರಿಂದ ಜನವರಿ 14 ರವರೆಗೆ ಶಾಲೆಗಳಿಗೆ ರಜೆ ಘೋಷಿಸ ಲಾಗಿದೆ. ಈ ನಿರ್ಧಾರವು 1 ರಿಂದ 8 ನೇ ತರಗತಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ವಿಜಯ ಪ್ರತಾಪ್ ಸಿಂಗ್, ಪರಿಷತ್ತಿನ ಶಾಲೆಗಳಲ್ಲಿ 1ರಿಂದ 8ನೇ ತರಗತಿವರೆಗೆ 15 ದಿನಗಳ ಕಾಲ ಚಳಿಗಾಲದ ರಜೆ ಇರುತ್ತದೆ. ಪ್ರೌಢಶಾಲೆಗಳಿಗೆ ಚಳಿಗಾಲದ ರಜೆಯ ಆದೇಶ ಹೊರಡಿಸಿಲ್ಲ’ ಎಂದರು. ಚಳಿಗಾಲದ ರಜಾದಿನಗಳು ಜನವರಿ 14ಕ್ಕೆ ಅಂತ್ಯಗೊಳ್ಳಲಿದ್ದು ಜನವರಿ 15ಕ್ಕೆ ಪ್ರಾರಂಭ ವಾಗುತ್ತವೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಸಹ ಡಿಸೆಂಬರ್ 27 ರಂದು ರಾತ್ರಿ 11 ರಿಂದ ಸಂಜೆ 5 ರವರೆಗೆ ಮುಂದಿನ ಆದೇಶದವರೆಗೆ ವಿಶ್ವವಿದ್ಯಾಲಯದಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದೆ. ಈವರೆಗೆ ದೆಹಲಿಯಲ್ಲಿ 263 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 252 ಪ್ರಕರಣಗಳು, ಗುಜರಾತ್ 19 ಹೊಸ ಓಮಿಕ್ರಾನ್ ಪ್ರಕರಣ ಗಳೊಂದಿಗೆ 97 ರಜಸ್ತಾನ್ ದಲ್ಲಿ 69 ಪ್ರಕರಣಗಳು ದಾಖಲಾಗಿವೆ. ಇನ್ನೂ ಕರ್ನಾಟಕದಲ್ಲಿ 32 ಪ್ರಕರಣಗಳು ದಾಖಲಾದರೆ ಕೇರಳದಲ್ಲಿ 65 ಪ್ರಕರಣಗಳಿವೆ.