Wednesday, 14th May 2025

ಕ್ಷಮೆಯಾಚಿಸಿದರೆ ಸಂಸದರ ಅಮಾನತು ವಾಪಸ್: ಪ್ರಲ್ಹಾದ ಜೋಶಿ

ನವದೆಹಲಿ: ಕ್ಷಮೆಯಾಚಿಸಿದರೆ 12 ಮಂದಿ ರಾಜ್ಯಸಭಾ ಸಂಸದರ ಅಮಾನ ತನ್ನು ರದ್ದು ಮಾಡಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಸಂಸದರ ಅಮಾನತು ನಿರ್ಧಾರ ವಾಪಸ್ ಪಡೆಯುವಂತೆ ಪ್ರತಿಪಕ್ಷಗಳಿಂದ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.

‘ಸಂಸದರನ್ನು ಯಾಕೆ ಅಮಾನತು ಮಾಡಲಾಗಿದೆ ಎಂಬುದನ್ನು ವಿವರಿಸಿದ್ದೇವೆ. ಏನು ನಡೆದಿತ್ತು ಎಂಬುದಕ್ಕೆ ದೇಶವೇ ಸಾಕ್ಷಿ ಯಾಗಿದೆ. ಇವತ್ತಾ ದರೂ ಸರಿ, ಅವರು ಕ್ಷಮೆ ಯಾಚಿಸಿದರೆ ಅಮಾನತು ನಿರ್ಧಾರ ವಾಪಸ್ ಪಡೆಯಲು ಸಿದ್ಧರಿದ್ದೇವೆ’ ಎಂದು ಜೋಶಿ ಹೇಳಿದ್ದಾರೆ.

ಸಂಸದರ ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಮಂಗಳವಾರವೂ ಸಂಸತ್‌ನಲ್ಲಿ ಧರಣಿ ನಡೆಸಿವೆ. ಈ ವಿಚಾರ ವಾಗಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಮಧ್ಯಾಹ್ನ ಪ್ರತಿಪಕ್ಷಗಳ ನಾಯಕರು ಸಭೆ ಸೇರಲಿದ್ದಾರೆ.

ಅಮಾನತುಗೊಂಡ 12 ಮಂದಿ ರಾಜ್ಯಸಭಾ ಸಂಸದರಲ್ಲಿ ಕಾಂಗ್ರೆಸ್‌ನ ಆರು, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನಾದ ತಲಾ ಇಬ್ಬರು, ಸಿಪಿಐ ಮತ್ತು ಸಿಪಿಎಂನ ತಲಾ ಒಬ್ಬರು ಇದ್ದಾರೆ.